ಬೆಳ್ತಂಗಡಿ: ನಾರಾವಿ ಗ್ರಾಮದ ನೂಜೋಡಿಯಲ್ಲಿ ವ್ಯಕ್ತಿಯೋರ್ವರು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಘಟನೆ ನಡೆದಿದೆ.
ನೂಜೋಡಿ ಮೊಂಟ ಮಲೆಕುಡಿಯ ಅವರು ತನ್ನ ಜಮೀನಿನ ಬಳಿ ಹಾದು ಹೋಗುವ ಸಿಂಗಲ್ ಪೇಸ್ ಇರುವ 3 ವಿದ್ಯುತ್ ವಯರ್ ಹಾದುಹೋಗುವ ವಿದ್ಯುತ್ ಲೈನ್ ಮೇಲೆ ತೆಂಗಿನ ಮರದ ಗರಿ (ಮಡಲು) ಬಿದ್ದಿರುವುದನ್ನು ಕಂಡರು.ಅದನ್ನು ಕೋಲಿನಿಂದ ಎಳೆದಾಗ ತಂತಿ ತುಂಡಾಗಿ ಕೆಳಗೆ ಬಿದ್ದು ಇವರು ಆಘಾತಕ್ಕೊಳಗಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪುತ್ರ ನೀಡಿದ ದೂರಿನಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ