Facebook Twitter Instagram
    Thursday, April 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಕಿಪಾಕ್ಸ್‌ ಸೋಂಕು ಪತ್ತೆಗೆ ಪರೀಕ್ಷಾ ಕಿಟ್‌ ಬಿಡುಗಡೆ
    ಇತ್ತೀಚಿನ ಸುದ್ದಿ

    ಮಂಕಿಪಾಕ್ಸ್‌ ಸೋಂಕು ಪತ್ತೆಗೆ ಪರೀಕ್ಷಾ ಕಿಟ್‌ ಬಿಡುಗಡೆ

    July 26, 2022
    Share

    ಮುಂಬೈ: ಮಂಕಿಪಾಕ್ಸ್‌ ವೈರಸ್‌ ಸೋಂಕು ಪತ್ತೆಗಾಗಿ ಜೀನ್ಸ್‌2ಮಿ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯು ಆರ್‌ಟಿ- ಪಿಸಿಆರ್‌ ಆಧರಿತ ಕಿಟ್ ಬಿಡುಗಡೆ ಮಾಡಿದೆ.

    ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ವೈರಸ್‌ನ ಸೋಂಕು ಇರುವುದನ್ನು ಈ ಕಿಟ್ ಬಳಸಿ ನಡೆಸುವ ಪರೀಕ್ಷೆಯಿಂದ 50 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ತಿಳಿಯಬಹುದಾಗಿದೆ ಎಂದು ಕಂಪನಿ ಮೂಲಗಳು ಹೇಳಿವೆ.

    ‘ಕಂಪನಿ ತಯಾರಿಸುವ ಕಿಟ್‌ಗಳು ಗರಿಷ್ಠ ಮಟ್ಟದ ನಿಖರತೆಯ ಫಲಿತಾಂಶ ನೀಡುತ್ತವೆ. ಅಲ್ಪಸಮಯದಲ್ಲಿಯೇ ಸೋಂಕು ಪತ್ತೆ ಹಚ್ಚುವುದು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ಆರ್‌ಟಿ-ಪಿಸಿಆರ್‌ ಆಧರಿತ ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ಜೀನ್ಸ್‌2ಮಿ ಕಂಪನಿಯ ಸಿಇಒ ಹಾಗೂ ಸಂಸ್ಥಾಪಕ ನೀರಜ್‌ ಗುಪ್ತಾ ಹೇಳಿದ್ದಾರೆ. ಮಾನವ ದೇಹದಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಗೆ ಬಳಸುವ ಸಾಧನಗಳ (ಐವಿಡಿ) ತಯಾರಿಕೆಯಲ್ಲಿ ಜೀನ್ಸ್‌2ಮಿ ಪ್ರೈವೇಟ್‌ ಲಿಮಿಟೆಡ್‌ ಮುಂಚೂಣಿಯಲ್ಲಿದೆ. ಕಂಪನಿಯು ಎರಡು ವಿಧದ ಕಿಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಬಳಸಬಹುದಾದ ಪಿಸಿಆರ್‌ ಆಧಾರಿತ ಕಿಟ್‌ ಹಾಗೂ ಆಸ್ಪತ್ರೆಗಳು, ವಿಮಾನನಿಲ್ದಾಣಗಳು, ಡಯಾಗ್ನೊಸ್ಟಿಕ್‌ ಕೇಂದ್ರಗಳು, ಪ್ರಯೋಗಾಲಯಗಳು ಹಾಗೂ ಆರೋಗ್ಯ ಶಿಬಿರಗಳಲ್ಲಿ ಬಳಸಬಹುದಾದ ಕಿಟ್‌ಗಳನ್ನು ಬಿಡುಗಡೆ ಮಾಡಿದೆ.

    Post Views: 208

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.