ಉಡುಪಿ: ಮಲ್ಪೆ ಪೋಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀ ನಗರದ ಪಾಳೆಕಟ್ಟೆ ನಿವಾಸಿ ಪ್ರಸಾದ್ (40) ರವರ ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ನೀರಿನ ಡ್ರಮ್‌ನ ಒಳಗಿನಿಂದ ದೇಹದ ಕಾಲು ಇದ್ದು, ಮೇಲ್ಬಾಗದಲ್ಲಿ ಅರ್ಧ ತಲೆಕೆಳಗೆ ಹಾಕಿದ ರೀತಿಯಲ್ಲಿ ಮೃ*ತದೇಹ ಪತ್ತೆಯಾಗಿದ್ದು, ದೇಹದ ಹಲವು ಭಾಗಗಳಲ್ಲಿ ಗಾ*ಯಗಳಿದ್ದು ಸಂಶಯಕ್ಕೆ ಎಡೆಮಾಡಿದೆ.
ಆತ್ಮಹತ್ಯೆ ಎಂದು ಬಿಂಬಿಸಿರುವ ಈ ಘಟನೆ ಹಲವು ಸಂಶಯಾಸ್ಪದ ರೀತಿಯಲ್ಲಿ ಮೃ*ತದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತುಮುತ್ತ ಭಯದ ವಾತಾವರಣ ನಿರ್ಮಾಣವಾಗಿದ್ದು, ಮೃ*ತನ ಮನೆಯವರನ್ನು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಜಿಲ್ಲಾ ಪೋಲೀಸ್ ಆಧೀಕ್ಷಕರಿಗೆ ದಲಿತ ಮುಖಂಡರಾದ ವಾಸುದೇವ ಮುದ್ದೂರು, ಗಣೇಶ್ ನೆರ್ಗಿ, ಹರೀಶ್ ಸಲ್ಯಾನ್, ರವಿ ಲಕ್ಷ್ಮೀನಗರ ಆಗ್ರಹಿಸಿದ್ದಾರೆ.