ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಅಂಗಡಿಯೊಂದಕ್ಕೆ ಬಂದಿದ್ದ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ಅರಸ್ ವೈ.ಎಚ್. ಅವರ ಪೀಠ ತೀರ್ಪು ಪ್ರಕಟಿಸಿದೆ.
ಬದ್ರುದ್ದೀನ್ ಯಾನೆ ಬದ್ರು ಶಿಕ್ಷೆಗೆ ಒಳಗಾದ ಅಪರಾಧಿ.2022ರ ಸೆ. 14ರಂದು ತಿಂಗಳಾಡಿಯ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ವೀಟ್ ಸ್ಟಾಲ್ ಎಂಬ ಅಂಗಡಿಗೆ ತನ್ನ 7 ವರ್ಷದ ಮಗನೊಂದಿಗೆ ಬಂದಿದ್ದ ಮಹಿಳೆ ತಿಂಡಿ ಖರೀದಿಸಿ ಅಂಗಡಿಯವರಿಗೆ ಹಣವನ್ನು ನೀಡುತ್ತಿದ್ದ ವೇಳೆ ಆರೋಪಿ ಬದ್ರು ಅಂಗಡಿಯೊಳಗೆ ಬಂದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ. ಈ ಕುರಿತು ಮಹಿಳೆ ನೀಡಿದ್ದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿ ಬದ್ರು ವಿರುದ್ಧ ಕಲಂ 354 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ. ರಾಮಕೃಷ್ಣ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರುಟಿದೀಗ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ 2 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು. ದಂಡದ ಹಣದಲ್ಲಿ 5 ಸಾವಿರ ರೂ. ಅನ್ನು ಸಂತ್ರಸ್ತೆಗೆ ನೀಡುವಂತೆಯೂ ಆದೇಶಿಸಲಾಗಿದೆ.