ಮಂಗಳೂರು: ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಸುಮಾರು 17 ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಪಾಂಡೆಶ್ವರ ಪೋಲಿಸರು ಕಾರ್ಯಚರಣೆ ಮೂಲಕ ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ಮಲ್ಪೆ ಕಿದಿಯೂರು ನಿವಾಸಿ ವಿಜಯ್ ಕುಮಾರ್ ಪ್ರಾಯ 40 ವರ್ಷ. ಈತನ ಮೇಲೆ ದಕ್ಷಿಣ ಪೊಲೀಸ್ ಠಾಣಾ ಆ ಕ್ರ ನಂ 92/2007 ಕಲಂ 381 IPC ರಂತೆ ಪ್ರಕರಣ ದಾಖಲಾಗಿ ಆರೋಪಿಯು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಸುಮಾರು 17 ವರ್ಷ ತಲೆಮರಿಸಿಕೊಂಡಿದ್ದ ಕಾರಣ ಸದರಿ ಪ್ರಕರಣವನ್ನು ಮಾನ್ಯ ನ್ಯಾಯಾಲಯವು LPC ಪ್ರಕರಣವಾಗಿ ಪರಿಗಣಿಸಿ ನ್ಯಾಯಾಲಯವು ಆರೋಪಿಯ ಮೇಲೆ LPC ವಾರೆಂಟ್ ಹೊರಡಿಸಿತ್ತು.ಸದರಿ ಆರೋಪಿಯನ್ನು ಪತ್ತೆಮಾಡಿ ಇಂದು ದಿನಾಂಕ 20/11/2024 ರಂದು ಕುಂದಾಪುರ HC ಪುಟ್ಟರಾಮ PC ಅಂಜನಯ್ಯ PC ಮಲ್ಲಿಕ್ ಜಾನ್ ರವರು ಆರೋಪಿಯನ್ನ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ದಿನಾಂಕ 03/12/2024 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಸಾರಾಂಶ
ದಿನಾಂಕ 05/04/2007 ರಂದು ಪಿರ್ಯಾದಿದಾರರ ಬಾಬ್ತು ಕಾರು KA19M9986 ನ್ನ ಫಳ್ನೀರ್ ನ ತಮ್ಮ ಕಚೇರಿ ಬಳಿ ನಿಲ್ಲಿಸಿದ್ದ ಕಾರಿಂದ ಅದರ ಚಾಲಕ ವಿಜಕುಮಾರ್ ನು ಕಾರಿನೊಳಗಿದ್ದ ಸೂಟ್ಕೇಸ್ ಒಳಗಿದ್ದ 2 ಲಕ್ಷ ರೂಪಾಯಿ ಹಣ ಹಾಗೂ ದಾಖಲೆಗಳನ್ನು ಕಳವುಮಾಡಿಕೊಂಡು ಹೋಗಿರುವುದಾಗಿರುತ್ತಾನೆ.