ಬಂಟ್ವಾಳ: ಸರಕಾರಿ ಬಸ್ ನ ನಿರ್ವಾಹಕನಿಗೆ ಅಪರಿಚಿತ ಪ್ರಯಾಣಿಕನೊರ್ವ ಹಲ್ಲೆ ನಡೆಸಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕ ದೇವಾನಂದ ಎಂಬವರಿಗೆ ಫರಂಗಿಪೇಟೆಯಲ್ಲಿ ಅಪರಿಚಿತ ಪ್ರಯಾಣಿಕ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.ಪುತ್ತೂರಿನಿಂದ ಮಂಗಳೂರಿನ ಕಡೆಗೆ ಹೋಗುವ ವೇಳೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಬಸ್ ಗೆ ಹತ್ತಿದ ಅಪರಿಚಿತ ಪ್ರಯಾಣಿಕನೋರ್ವ ನಿರ್ವಾಹಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಬಳಿಕ ಹಲ್ಲೆ ನಡೆಸಿದ್ದಾನೆ.ಬಸ್ಸ್ ನಿಲ್ಲಿಸದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಆತ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಯೂ ದೂರಿನಲ್ಲಿ ಉಲ್ಲೇಖವಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.