ಮಂಗಳೂರು : ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ನಗರದ ವಿವಿಧೆಡೆಯ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರ ಕಟ್ಟೆ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಎರ್ನಾಕುಳಂ ಜಿಲ್ಲೆಯ ಶ್ರೀಹರಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು, ನೀರುಮಾರ್ಗದ ಬಸ್ ನಿಲ್ದಾಣ ಬಳಿ ತಿರುವನಂತಪುರ ಜಿಲ್ಲೆಯ ಕೆಲ್ರಾಯ್ ಮೊಹಮ್ಮದ್ ಯೂಸುಫ್ ನನ್ನು ಮಂಗಳೂರು ಗ್ರಾ. ಠಾಣೆ ಪೊಲೀಸರು, ಕೆಂಜಾರು ಜಂಕ್ಷನ್ ಬಳಿ ಉಮ್ಮರ್ ಫಾರುಕ್ ಬಜಪೆ ಪೊಲೀಸರು ಬಂಧಿಸಿದ್ದಾರೆ.
ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.