ಕಾರ್ಕಳ: ಟೂರಿಸ್ಟ್ (ಟಿಟಿ) ವಾಹನವೊಂದು ಹೊತ್ತಿ ಉರಿದ ಘಟನೆ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ನಡೆದಿದೆ.
ಉಡುಪಿಯಿಂದ ಮಾಳ ಮಾರ್ಗವಾಗಿ ಕುದುರೆಮುಖ ಮೂಲಕ ಕಳಸ ಕಡೆಗೆ ತೆರಳುತ್ತಿದ್ದ ಹನ್ನೊಂದು ಮಂದಿ ಇದ್ದ ಟೂರಿಸ್ಟ್ ವಾಹನದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಬೆಂಕಿ ವಾಹನದ ತುಂಬಾ ವ್ಯಾಪಿಸಿದೆ. ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ತಕ್ಷಣ ಹೊರ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿ ಜ್ವಾಲೆಗೆ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.ಕಾರ್ಕಳ ಅಗ್ನಿಶಾಮಕ ಠಾಣೆ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಟೂರಿಸ್ಟ್ ವಾಹನದ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಿಸಿ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ.ಕಾರ್ಕಳ ಅಗ್ನಿ ಶಾಮಕದಳ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಪ್ರಮುಖರಾದ ನಿತ್ಯಾನಂದ, ಜಯ, ಮುಜಾಂಬಿಲ್ ಕಾರ್ಯಾಚರಣೆ ತಂಡದಲ್ಲಿದ್ದರು.