ಕಾಸರಗೋಡು: :ಮದುವೆ ಗೆಂದು ಲಿಫ್ಟ್‌ನಲ್ಲಿ ಸಭಾಂಗಣಕ್ಕೇರುತ್ತಿದ್ದ ವೇಳೆ ಲಿಫ್ಟ್ ದಿಢೀರ್ ಕೈಕೊಟ್ಟು ವಧೂ-ವರರ ಸಹಿತ 18 ಮಂದಿಯಿದ್ದ ವಿವಾಹ ತಂಡ ಎರಡು ಗಂಟೆಗಳ ತನಕ ಲಿಫ್ಟ್‌ನಲ್ಲೇ ಸಿಲುಕಿಕೊಂಡ ಘಟನೆ ತೃಕ್ಕರಿ ಪುರ ವಡಕ್ಕೇ ಕೊವ್ವಲ್‌ನಲ್ಲಿ ನಡೆದಿದೆ. ಪಳಯಂಗಾಡಿ ನಿವಾಸಿಯಾದ ವರ ಹಾಗೂ ಹೊಸದುರ್ಗ ನಿವಾಸಿಯಾದ ವಧು ಮತ್ತು ಅವರ ಕುಟುಂಬದವರು 1ನೇ ಮಹಡಿಯಲ್ಲಿರುವ ಸಭಾಂಗಣಕ್ಕೆ ಹೋಗಲು ಲಿಫ್ಟ್ ಗೇರಿದ್ದರು. ಲಿಫ್ಟ್ ಮೇಲೇರುತ್ತಿದ್ದಂತೆ ಭಾರೀ ಸದ್ದಿನೊಂದಿ ಗೆ ಅರ್ಧದಲ್ಲೇ ನಿಂತಿತ್ತು. ಅಗ್ನಿಶಾಮಕದಳದ ಎರಡು ಗಂಟೆಗಳ ಪ್ರಯತ್ನದಿಂದ ಲಿಫ್ಟ್‌ನ ಬಾಗಿಲು ತೆರೆದು ಅದರಲ್ಲಿ ಸಿಲುಕಿಕೊಂಡಿದ್ದವರನ್ನು ಏಣಿಯ ಮೂಲಕ ರಕ್ಷಿಸಲಾಯಿತು. ನಿಗದಿತ ಸಂಖ್ಯೆಗಿಂತ ಅಧಿಕ ಮಂದಿ ಲಿಫ್ಟ್ ಏರಿದ್ದು, ಲಿಫ್ಟ್ ನಿಲುಗಡೆಗೆ ಕಾರಣವೆನ್ನಲಾಗಿದೆ.