Facebook Twitter Instagram
    Thursday, September 10
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ವೆನ್ಲಾಕ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಅಂಗಾಂಗ ದಾನ ಪ್ರಕ್ರಿಯೆ – ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ
    ಇತ್ತೀಚಿನ ಸುದ್ದಿ

    ವೆನ್ಲಾಕ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಅಂಗಾಂಗ ದಾನ ಪ್ರಕ್ರಿಯೆ – ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

    January 11, 2025
    Share

    ಮಂಗಳೂರು : ಸರ್ಕಾರಿ ಆಸ್ಪತ್ರೆ ವೆನ್ಲಾಕ್​ನಲ್ಲಿ 176 ವರ್ಷಗಳ ಇತಿಹಾಸದಲ್ಲಿ ಇಂದು ಮೊದಲ ಬಾರಿಗೆ ಅಂಗಾಂಗ ದಾನ ನಡೆದಿದ್ದು, ಮೆದುಳು ನಿಷ್ಕ್ರಿಯವಾದ ಮಹಿಳೆಯ ಎರಡು ಕಣ್ಣು ಮತ್ತು ಲಿವರ್ ದಾನ ಪ್ರಕ್ರಿಯೆ ನಡೆಯಿತು.

    ಶಿವಮೊಗ್ಗ ರಾಗಿಗುಡ್ಡೆಯ ರೇಖಾ (41) ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ಜನವರಿ 6 ರಂದು ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ರೇಖಾ ಅವರ ಮೆದುಳು ನಿಷ್ಕ್ರಿಯವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅಂಗಾಂಗ ದಾನದ ಸಲಹೆ ನೀಡಿದ್ದು, ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು.

    ರೇಖಾ ಅವರ ಕಣ್ಣು ಮತ್ತು ಲಿವರ್ ತೆಗೆದು ದಾನ ಪ್ರಕ್ರಿಯೆ ನಡೆಸಲಾಯಿತು. ಎರಡು ಕಣ್ಣನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಲಿವರ್​ ಅನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಮೂಲಕ ಮೃತ ಮಹಿಳೆ ರೇಖಾ ಮೂರು ಮಂದಿಯ ಬಾಳಿಗೆ ಬೆಳಕಾದರು. ಈ ಬಗ್ಗೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್, ”ರೇಖಾ ಅವರು‌ ಜನವರಿ 6ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳು ನಿಷ್ಕ್ರಿಯವಾದ ಪರಿಣಾಮ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಕಣ್ಣು ಮತ್ತು ಲಿವರ್ ದಾನ ಮಾಡಲಾಗಿದೆ. ಇದು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 176 ವರ್ಷಗಳ ಇತಿಹಾಸದಲ್ಲಿ ನಡೆದ ಮೊದಲ ಅಂಗಾಂಗ ದಾನವಾಗಿದೆ” ಎಂದರು.

    Post Views: 264

    Related Posts

    ಅಕ್ರಮ ಮರಳು ಸಾಗಾಣಿಕೆ ವೇಳೆ ಪೊಲೀಸ್ ದಾಳಿ: ನದಿಗೆ ಜಿಗಿದಿದ್ದ ಯುವಕ ಸಾವು..!!

    September 10, 2026

    ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಲ ಶುದ್ದೀಕರಣ ಉಪಕರಣ ಕೊಡುಗೆ

    September 10, 2026

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರೂಂ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ: ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲು

    September 10, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಅಕ್ರಮ ಮರಳು ಸಾಗಾಣಿಕೆ ವೇಳೆ ಪೊಲೀಸ್ ದಾಳಿ: ನದಿಗೆ ಜಿಗಿದಿದ್ದ ಯುವಕ ಸಾವು..!!

    September 10, 2026

    ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಲ ಶುದ್ದೀಕರಣ ಉಪಕರಣ ಕೊಡುಗೆ

    September 10, 2026

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರೂಂ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ: ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲು

    September 10, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.