ಪೊಲೀಸ್ ಕ್ವಾರ್ಟರ್ಸ್ ನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲ್ಲೆ ಮಾಡಿದ್ದು ಅಲ್ಲದೆ, ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯಲ್ಲಿ ಪಿಎಸ್ಐ ನಿತ್ಯಾನಂದ ಪತ್ನಿ ದೂರು ನೀಡಿದ್ದರು. ಇದೀಗ ಈ ಒಂದು ದೂರಿನ ಅನ್ವಯದ ಮೇಲೆ PSI ನಿತ್ಯಾನಂದನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಹೌದು ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯ ಪಿಎಸ್ಐ ನಿತ್ಯಾನಂದ ಅಮಾನತು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಪಿಎಸ್ಐ ನಿತ್ಯಾನಂದನ ವಿರುದ್ಧ ರಾತ್ರೋರಾತ್ರಿ ಪತ್ನಿ ಠಾಣೆಗೆ ಬಂದು ದೂರು ನೀಡಿದ್ದರು.ಕಳಸ ಪೋಲಿಸ್ ವಸತಿಗೃಹದಲ್ಲಿ ನನ್ನ ಮೇಲೆ ನಿತ್ಯಾನಂದ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಅಮಿತಾ ದೂರು ನೀಡಿದ್ದರು. ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದು ಅಲ್ಲದೆ, ವರದಕ್ಷಿಣೆ ಕಿರುಕುಳ ನೀಡಿದ್ದ.
ಮಹಿಳೆಯರ ಜೊತೆಗೆ ಪತಿ ನಿತ್ಯಾನಂದ ಅನೈತಿಕ ಸಂಬಂಧ ಹೊಂದಿದ್ದ ಅಲ್ಲದೆ ವರದಕ್ಷಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಪತ್ನಿ ಅಮಿತಾ ಕಳಸ ಠಾಣೆಗೆ ದೂರು ನೀಡಿದ್ದರು.ನಿತ್ಯಾನಂದ ಸೇರಿದಂತೆ ಮೂರ ವಿರುದ್ಧ ಅಮಿತಾ ದೂರು ಸಲ್ಲಿಸಿದ್ದಾರೆ. ಶನಿವಾರ ಕಳಸ ಠಾಣೆಯಲ್ಲಿ ನಿತ್ಯಾನಂದನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು ಬಿ ಏನ್ ಎಸ್ ಕಾಯ್ದೆ 115 (2), 351 (1), 49ರ ಅಡಿ ಕೇಸ್ ದಾಖಲಾಗಿತ್ತು. ಚಿಕ್ಕಮಂಗಳೂರು ಜಿಲ್ಲೆಯ ಕಳಸ ಠಾಣೆಯಲ್ಲಿ ಈ ಒಂದು ದಾಖಲಾಗಿತ್ತು. ಇದೀಗ ಪಿಎಸ್ಐ ನಿತ್ಯಾನಂದನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.