ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್‌ನಲ್ಲಿ 2016ರ ಜನವರಿಯಲ್ಲಿ ನಡೆದಿದ್ದ ವೃದ್ಧ ದಂಪತಿಯ ಕೊಲೆ ಮತ್ತು ಸುಲಿಗೆ ಪ್ರಕರಣದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ.ಅವರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ದಕ್ಷಿಣಕನ್ನಡ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಈ ಒಂದು ಆದೇಶ ನೀಡಿದೆ. 2016ರ ನವೆಂಬರ್ 10ರಂದು ವೃದ್ಧ ದಂಪತಿಯ ಹತ್ಯೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕುಂಜೆ ಗ್ರಾಮದಲ್ಲಿ ಭೀಕರ ಕೊಲೆ ನಡೆದಿತ್ತು. ಇದೀಗ ಕೊಲೆ ಆರೋಪಿ ಗದಗ ಜಿಲ್ಲೆಯ ಬಿ.ಸಿ ಕೇರಿ ಓಣಿಯ ನಿವಾಸಿ ರಾಜು ಕಲ್ಲವಡ್ಡರ್ ಯಾನೆ ರಾಜೇಶ್ (37) ಶಿಕ್ಷೆಗೊಳಗಾದವನು. ವರ್ಕಿ ಕೆ ಎಂ (85) ಎಲಿಕುಟ್ಟಿ (80) ಎಂಬ ದಂಪತಿಗಳನ್ನು ಹತ್ಯೆಗೆದ್ದಿದ್ದ ರಾಜು. ದಂಪತಿಯ ಕೊಲೆಮಾಡಿ 200 ನೂರು ಗ್ರಾಮ ಚಿನ್ನ 4.5 ಲಕ್ಷ ನಗದು ಹಣ ದರೋಡೆ ಮಾಡಲಾಗಿತ್ತು.