Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»2,000 ಕೋಟಿ ರೂ.ಗೂ ಹೆಚ್ಚು ಸೈಬ‌ರ್ ವಂಚನೆ ನಡೆಸಿದ ತಂಡವೊಂದರ ಕಿಂಗ್‌ಪಿನ್‌ ಬಂಧನ
    ಇತ್ತೀಚಿನ ಸುದ್ದಿ

    2,000 ಕೋಟಿ ರೂ.ಗೂ ಹೆಚ್ಚು ಸೈಬ‌ರ್ ವಂಚನೆ ನಡೆಸಿದ ತಂಡವೊಂದರ ಕಿಂಗ್‌ಪಿನ್‌ ಬಂಧನ

    January 29, 2025
    Share

    ಜೈಪುರ: 2,000 ಕೋಟಿ ರೂ.ಗೂ ಹೆಚ್ಚು ಸೈಬ‌ರ್ ವಂಚನೆ ನಡೆಸಿದ ತಂಡವೊಂದರ ಕಿಂಗ್‌ಪಿನ್‌ನನ್ನು ಶ್ರೀಗಂಗಾನಗರದಲ್ಲಿ ಬಂಧಿಸುವ ಮೂಲಕ ಭಾರಿ ವಂಚನೆ ಭೇದಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಗಳ ವಿರುದ್ಧ ದೇಶಾದ್ಯಂತ ಸೈಬ‌ರ್ ವಂಚನೆಯ ದೂರುಗಳಿವೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಗಂಗಾನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ಮಾತನಾಡಿ, ಬಂಧಿತ ಅಜಯ್ ಆರ್ಯ ಮತ್ತು ಆತನ ಸಹಚರರು ಸಾವಿರಾರು ಜನರಿಗೆ ಸುಮಾರು 2,000 ಕೋಟಿ ರೂಪಾಯಿಗಳ ಸೈಬರ್ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕದ ನಿವಾಸಿ ಕಾಂತಪ್ಪ ಬಾಬು ಚವ್ಹಾಣ್‌ ಅವರು ಮಂಗಳವಾರ ಪುರಾಣಿ ಅಬಾದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ನಾಟಕದ ಕ್ಯಾಪ್ರೋರ್ಎಫ್‌ಎಕ್ಸ್ ಕಂಪನಿಯಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ವಂಬ ಶ್ರೀಗಂಗಾನಗರಕ್ಕೆ ಪಲಾಯನಗೈದಿದ್ದರು ಎಂದು ತಿಳಿಸಿದ್ದಾರೆ.

    ಪೊಲೀಸರು ಆರ್ಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಶೋಧದ ವೇಳೆ 10 ಲಕ್ಷ ರೂಪಾಯಿ ನಗದು, ಮೂರು ಸಿಪಿಯುಗಳು, ಆರು ಮೊಬೈಲ್‌ ಫೋನ್‌ಗಳು, ಎಂಟು ಎಟಿಎಂ ಕಾರ್ಡ್‌ಗಳು, ಮೂರು ಪ್ಯಾನ್ ಕಾರ್ಡ್‌ಗಳು, ಸುಮಾರು 85 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಮತ್ತು ಸೈಬ‌ರ್ ವಂಚನೆಗೆ ಸಂಬಂಧಿಸಿದ ಇತರ ದಾಖಲೆಗಳು ಪತ್ತೆಯಾಗಿವೆ.

    ಅಜಯ್ ಆರ್ಯ, ದೀಪಕ್ ಆರ್ಯ, ಲಜಪತ್ ಆರ್ಯ, ಸೌರಭ್ ಚಾವ್ಹಾ, ಅವರ ಪತ್ನಿ ಸಲೋನಿ ಚಾವ್ಹಾ, ಕರಮ್‌ಜಿತ್ ಸಿಂಗ್, ಬಲ್ಟಿತ್ ಸಿಂಗ್, ರಾಜೇಂದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು 2022 ರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಟೆಕ್ಸಲ್ ಟೆಕ್ ಎಂಬ ಕಂಪನಿಯನ್ನು ತೆರೆದು ಜನರಿಗೆ ಸೈಬರ್ ತರಬೇನಿ ನೀಡಲು ಪ್ರಾರಂಭಿಸಿದ್ದರು ಎಂದು ತನಿಖೆಯಿ ತಿಳಿದುಬಂದಿದೆ.

    Post Views: 203

    Related Posts

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.