ಮಂಗಳೂರು: ರಾಜ್ಯಾದ್ಯಂತ ಹೊಸ ಸಂಚಲನ ಮೂಡಿಸಿದ್ದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಇದೀಗ ಆಸ್ಪತ್ರೆಯಿಂದ ನೇರವಾಗಿ ಜೈಲಿಗೆ ಶಿಫ್ಟ್ ಆಗಿದ್ದಾನೆ. ಆರೋಪಿ ಮುರುಗನ್ ಡಿ ಜೈಲಿಗೆ ಸೇರಿರುವ ವ್ಯಕ್ತಿ.

ಪೊಲೀಸರ ವಶದಲ್ಲಿದ್ದ ವೇಳೆ ಸ್ಥಳ ಮಹಜರು ಮಾಡುತ್ತಿದ್ದಾಗ ಅಧಿಕಪ್ರಸಂಗ ಮಾಡಲು ಹೋಗಿ ಪೊಲೀಸರಿಂದ ಗುಂಡೇಟು ತಿಂದಿದ್ದ. ಕರ್ನಾಟಕ-ಕೇರಳ ಗಡಿ ಭಾಗದ ಅಜ್ಜಿನಡ್ಕ ಎಂಬಲ್ಲಿ ಈತ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ಸಂದರ್ಭ ಉಳ್ಳಾಲ ಠಾಣಾಧಿಕಾರಿ ಆತನ ಕಾಲಿಗೆ ಗುಂಡು ಹಾರಿಸಿದ್ದರು.
ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆತ ಇದೀಗ ಚೇತರಿಸಿಕೊಂಡಿದ್ದಾನೆ. ಆದ್ದರಿಂದ ಆತನನ್ನು ಡಿಸ್ಟಾರ್ಜ್ ಮಾಡಿ ಜಿಲ್ಲಾ ಕಾರಾಗ್ರಹಕ್ಕೆ ಕಳುಹಿಸಲಾಯಿತು.