ಕುಂದಾಪುರ: ವೆಂಕಟರಮಣ ಆರ್ಕೇಡ್‌ನಲ್ಲಿರುವ ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯಲ್ಲಿ ಇರಿಸಿದ್ದ 7.25 ಕೋ.ರೂ. ಠೇವಣಿಯನ್ನು ಗ್ರಾಹಕರಿಗೆ ಮರಳಿಸದೆ ವಂಚಿಸಲಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಕಸಬಾದ ಶ್ರೀಧರ್ ದೂರು ನೀಡಿದ್ದು, ಅವರು 2022ರಲ್ಲಿ ಮಗಳಾದ ಶ್ರೀರûಾ ಹೆಸರಿನಲ್ಲಿ ಇಟ್ಟ 2 ಲಕ್ಷ ರೂ., ಶ್ರೀ ವರ್ಷಾ ಹೆಸರಿನಲ್ಲಿ ಇಟ್ಟ 5 ಲಕ್ಷ ರೂ. ಠೇವಣಿ ವಾಯಿದೆ ಮುಗಿದರೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಮತ್ತು ನಿರ್ದೇಶಕರು ಆ ಹಣವನ್ನು ಮರಳಿಸಿಲ್ಲ. ಇದೇ ರೀತಿ ಸುಮಾರು 44 ಜನರ ಒಟ್ಟು 7,18,24,831 ರೂ. ಠೇವಣಿ ವಾಯಿದೆ ಮುಗಿದರೂ ಮರಳಿ ನೀಡದೇ ಇರುವುದು ಗಮನಕ್ಕೆ ಬಂದಿದೆ.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ, ನಿರ್ದೇಶಕರಾದ ಪ್ರಕಾಶ ಲೋಬೋ, ಮಹೇಶ ಲಕ್ಷ್ಮಣ ಕೊತ್ವಾಲ, ವಿಟuಲ, ಅವಿನಾಶ ಪಿಂಟೋ, ಕೆ. ರಾಜೇಶ ದೈವಜ್ಞ, ಎಚ್. ಮಹಾಬಲ, ರತ್ನಾಕರ, ದಯಾನಂದ, ಮರ್ವಿನ್ ಫೆರ್ನಾಂಡಿಸ್, ಸರೋಜಾ, ಸುಧಾಕರ, ಗೋಪಾಲ, ಡಾ| ದಿನಕರ ಇವರೆಲ್ಲ ಸೇರಿ ಒಟ್ಟು 7,25,24,831 ರೂ. ಹಣವನ್ನು ಠೇವಣಿದಾರರಿಗೆ ವಾಪಸು ನೀಡಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಅಧಿಕಾರ ದುರುಪಯೋಗ ಮಾಡಿದ್ದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.