ಮಂಗಳೂರು: ಔಷಧಿ ಖರೀದಿಸುವ ನೆಪದಲ್ಲಿ ಬಂದು ಮೆಡಿಕಲ್ ಶಾಪ್ ಮಾಲಕಿಯ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಕುಂಜೂರು ಪಂಜ ನಿವಾಸಿ ಶಂಸುದ್ದೀನ್ ಅಸ್ಟರ್ ಅಲಿ (28), ಪುತ್ತೂರು ಬನ್ನೂರು ನಿವಾಸಿ ನೌಷಾದ್ ಬಿ.ಎ.(37) ಬಂಧಿತ ಆರೋಪಿಗಳು. ಠಾಣಾ ಬದಿಯಡ್ಕ ಪೊಲೀಸರು ಇವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಜನವರಿ 11 ರಂದು ಸಂಜೆ ನೀರ್ಚಾಲು ಮೇಲಿನ ಪೇಟೆಯಲ್ಲಿ ಈ ಘಟನೆ ನಡೆದಿದೆ. ಸರೋಜಿನಿ ಎಸ್.ಎನ್.ಅವರ ಮಾಲಕತ್ವದಲ್ಲಿರುವ ರಾಘವೇಂದ್ರ ಆಯುರ್ವೇದ ಮೆಡಿಕಲ್ ನಲ್ಲಿ ಕಳವು ನಡೆದಿತ್ತು.
ಇಬ್ಬರು ಯುವಕರು ಬೈಕ್ ನಲ್ಲಿ ಬಂದು, ಒಬ್ಬ ಬೈಕಿನಲ್ಲೇ ಕುಳಿತಿದ್ದ ಇನ್ನೊಬ್ಬ ಮೆಡಿಕಲ್ ಒಳಗೆ ಪ್ರವೇಶಿಸಿ ಔಷದ ಬೇಕೆಂದು ಕೇಳಿದ್ದ. ಔಷದಿ ನೀಡುವ ಮಧ್ಯೆ ಯುವಕ ಸರೋಜಿನಿಯವರ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರ ಎಗರಿಸಿ ಬೈಕ್ ಹತ್ತಿ ಪರಾರಿಯಾಗಿದ್ದಾರೆ ಎಂದು ದೂರಲಾಗಿತ್ತು.ಈ ಬಗ್ಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು , ಸಿಸಿ ಟಿ.ವಿ.ಕ್ಯಾಮರಾ, ಸೈಬರ್ ಸೆಲ್ ರಿತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ. ಕಳ್ಳತನ ಮಾಡಿ ಮಾರಾಟ ಮಾಡಿದ್ದ ಚಿನ್ನದ ಸರವನ್ನ ಮಂಗಳೂರಿನ ಚಿನ್ನದಂಗಡಿಯೊಂದರಿಂದ ವಶಕ್ಕೆ ಪಡಿಸಿಕೊಳ್ಳಲಾಗಿದೆ