ಉಡುಪಿ: ಉಡುಪಿಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಕಳ್ಳರು ಪೊಲೀಸ್ ಕ್ವಾಟ್ರಸ್‌ನಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಆ ಚಾಣಾಕ್ಷ ಕಳ್ಳರು ಯಾರು ಅನ್ನೋದನ್ನು ಪತ್ತೆ ಹಚ್ಚಲು ಉಡುಪಿ ಪೊಲೀಸರಿಂದ ಇದುವರೆಗೂ ಸಾಧ್ಯವಾಗಿಲ್ಲ.

ಇದೀಗ ಪೊಲೀಸರ ವೀಕ್ ನೆಸ್ ಅರಿತ ಕಳ್ಳರು ಮತ್ತೆ ಪೊಲೀಸ್ ಕ್ವಾಟ್ರಸ್‌ಗೆ ಕನ್ನ ಹಾಕಿ ಮಾಲು ಸಮೇತ ಎಸ್ಕೇಪ್ ಆಗಿದ್ದಾರೆ. ಉಡುಪಿ ನಗರದ ಮಿಷನ್ ಕಂಪೌಂಡ್ ಬಳಿಯ ಡಿ.ಎ.ಆರ್ ಕಛೇರಿ ಸಮೀಪದಲ್ಲೇ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯ ಕ್ವಾಟ್ರಸ್‌ಗೆ ನಿನ್ನೆ ರಾತ್ರಿ ಸರಿ ಸುಮಾರು ಎರಡರಿಂದ ಮೂರು ಗಂಟೆಯ ವೇಳೆಗೆ ಕಳ್ಳರು ನುಗ್ಗಿದ ಅನುಮಾನ ಇದೆ. ಇಂದು ಮುಂಜಾನೆ ಡ್ಯೂಟಿ ಮುಗಿಸಿ ಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಪೊಲೀಸ್ ಕ್ವಾಟ್ರಸ್‌ನಲ್ಲಿ ನಡೆದ ಪ್ರಕರಣವನ್ನು ಬೇಧಿಸಲು ಇನ್ನೂ ಸಾಧ್ಯವಾಗದ ಪೊಲೀಸರು ಇದನ್ನು ಬೇದಿಸ್ತಾರಾ ಅಂತ ಜನ ಪ್ರಶ್ನೆ ಮಾಡಿದ್ದಾರೆ