ಕಾಪು: ಇತ್ತೀಚಿಗೆ ಉದ್ಯಾವರದಲ್ಲಿ ನಡೆದ ಎಟಿಎಂ ನಲ್ಲಿ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ಕಣ್ಣೂರು ಪಡೀಲ್ ನಿವಾಸಿ ಯಾಸೀನ್(21) ಹಾಗೂ ಮಂಗಳೂರು ಮಂಜನಾಡಿ ಸಮೀಪದ ಅಸೈಗೋಳಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳ್ಳತನಕ್ಕೆ ಬಳಸಿರುವ ದ್ವಿಚಕ್ರ ವಾಹನ, ಜಾಕೆಟ್, ಹೆಲ್ಮೆಟ್, ಕ್ಯಾಪ್, ಹ್ಯಾಂಡ್ ಗ್ಲೌಸ್, ಕತ್ತಿ ಹಾಗೂ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಫೆ.12ರಂದು ಬೆಳಗಿನ ಜಾವ ಉದ್ಯಾವರ ಕೆನರಾ ಬ್ಯಾಂಕ್ ATM ಪ್ರವೇಶಿಸಿ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಿಕ್ಕಿ ಬೀಳುವ ಸಂದರ್ಭ ಪರಾರಿಯಾಗಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಮಂಗಳೂರಿನ ಬಂದರನಲ್ಲಿ ಫೆ.26ರಂದು ಬೆಳಗ್ಗೆ ಬಂಧಿಸಿದ್ದಾರೆ.
