Facebook Twitter Instagram
    Thursday, September 10
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಬಳಸಿ ಸಾರ್ವಜನಿಕರಿಗೆ ವಂಚನೆ..!!
    ಇತ್ತೀಚಿನ ಸುದ್ದಿ

    ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಬಳಸಿ ಸಾರ್ವಜನಿಕರಿಗೆ ವಂಚನೆ..!!

    March 2, 2025
    Share

    ಕುಂದಾಪುರ: ಫೆರ್ರಿ ರಸ್ತೆಯಲ್ಲಿ ಅರ್ಜಿ ಕೇಂದ್ರ ನಡೆಸುತ್ತಿರುವ ಕೋಡಿ ನಾಗೇಶ್ ಎಂಬುವರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿಯಾಗಿ ತಯಾರಿಸುವ ದಸ್ತಾವೇಜಿಗೆ ಸ್ಟಾಂಪ್ ಹಾಕಿ, ಸರ್ಕಾರಿ ಅಧಿಕಾರಿಗಳ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚಿಸುತ್ತಿರುವ ಕುರಿತು ಬಂದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಬಗ್ಗೆ ಕುಂದಾಪುರ ಎಸ್‌ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿ ನ್ಯಾಯಾಲಯದ ಅನುಮತಿ ಪಡೆದು ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಬೈಂದೂರು ಮುದ್ರಣಾಧಿಕಾರಿಗಳ ಸೀಲು, ಕುಂದಾಪುರ ಆಸ್ಪತ್ರೆಯ ಜನನ-ಮರಣ ಉಪನೋಂದಣಾಧಿಕಾರಿಗಳ ಸೀಲು, ಬೀಜಾಡಿ ಗ್ರಾ.ಪಂ.ನ ಸೀಲು, ಜಿಲ್ಲಾಧಿಕಾರಿಗಳ ಕಚೇರಿಯ ಸೀಲು, ಕುಂದಾಪುರದ ಮದುವೆ ನೋಂದಣಾಧಿಕಾರಿಯ ಸೀಲು, ನಗರಸಭೆಯ ಜನನ-ಮರಣ ನೋಂದಣಾಧಿಕಾರಿಯ ಸೀಲು, ಕುಂದಾಪುರ ತಹಶೀಲ್ದಾರ್ ಸೀಲು, ಬನ್ನೂರು ಗ್ರಾ.ಪಂ. ಅಧ್ಯಕ್ಷರ ಸೀಲು, ನಾವುಂದ ಶಾಲಾ ಮುಖ್ಯೋಪಾಧ್ಯಾಯರ ಸೀಲು, ಮುದೂರಿನ ಭಾರತ್ ಮಾತಾ ಪ್ರೌಢಶಾಲೆಯ ಸೀಲು, ಗೋಪಾಡಿ ಪಿಡಿಒ ಸೀಲು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸೀಲು, ಬೈಂದೂರು ಉಪನೋಂದಣಾಧಿಕಾರಿ ಸೀಲು, ಶಿಕ್ಷಣ ಭಾರತಿ ಸಹಕಾರಿಯ ಅಧ್ಯಕ್ಷರ ಸೀಲು, ಉಡುಪಿ ಉಪತಹಶೀಲ್ದಾರರ ಸೀಲು, ಕುಂದಾಪುರ ತಾಲೂಕು ಭೂಮಾಪಕರ ಸೀಲು, ಮದುವೆ ಅಧಿಕಾರಿಯ ಸೀಲು, ಬಸೂರು ಗ್ರಾ.ಪಂ.ನ ಸೀಲುಗಳು ಹಾಗೂ ದಿನ, ತಿಂಗಳು, ವರ್ಷ ಇರುವ ರಬ್ಬರ್ ಸ್ಟಾಂಪ್‌ವೊಂದು ಪತ್ತೆಯಾಗಿದೆ. ಅವುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಆರೋಪಿ ಕೋಡಿ ನಾಗೇಶ್ ಈ ನಕಲಿ ಸರ್ಕಾರಿ ಸ್ಟಾಂಪ್‌ಗಳನ್ನು ಬಳಸಿ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಮೂಲಕ ನಕಲಿ ಅಧಿಕೃತ ದಾಖಲೆಗಳು ಮತ್ತು ಸಹಿಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಸ್ವಾಧೀನ ಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

    Post Views: 201

    Related Posts

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರೂಂ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ: ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲು

    September 10, 2026

    ಮುಲ್ಕಿ: ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನ ಕಳವು ಪ್ರಕರಣದಲ್ಲಿ ನಾಲ್ವರು ಅರೆಸ್ಟ್

    September 10, 2026

    ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಪದ್ಮರಾಜ್ ರಾಮಯ್ಯ ಪೂಜಾರಿ ನೇಮಕ

    September 10, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರೂಂ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ: ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲು

    September 10, 2026

    ಮುಲ್ಕಿ: ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನ ಕಳವು ಪ್ರಕರಣದಲ್ಲಿ ನಾಲ್ವರು ಅರೆಸ್ಟ್

    September 10, 2026

    ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಪದ್ಮರಾಜ್ ರಾಮಯ್ಯ ಪೂಜಾರಿ ನೇಮಕ

    September 10, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.