ಉಡುಪಿ: ತುಳುನಾಡಿನ ದೇವಾಲಗಳ ಜಾತ್ರೆಗಳಲ್ಲಿ ಒಂದೊಂದು ವಿಶಿಷ್ಟ ಆಚರಣೆ ಇದೆ. ಉಡುಪಿಯ ಕೆಮ್ತೂರು ವಿಷ್ಣು ಮೂರ್ತಿ ದೇವರ ಕಟ್ಟೆ ಪೂಜೆಯ ಸಂದರ್ಭ ವಿಶಾಲಗದ್ದೆಯಲ್ಲಿ ತೂಟೆದಾರ ಎಂಬ ವಿಶಿಷ್ಟ ಆಚರಣೆ ನಡೆದಿದೆ.

ತೆಂಗಿನಗರಿಯನ್ನು ಒಂದೊಂದು ಕಟ್ಟುಗಳನ್ನಾಗಿ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಎಸೆಯುತ್ತಾರೆ. ಇದನ್ನೇ ತೂಟೆದಾರ ಎನ್ನುತ್ತಾರೆ. ಜನ ಎರಡು ಗುಂಪುಗಳಾಗಿ ವಿಂಗಡಿಸಿ ಪರಸ್ಪರ ಎಸೆಯುತ್ತಾರೆ. ದೇವರು ಕಟ್ಟೆ ಪೂಜೆಗೆ ಬಂದಾಗ ಎದುರು ಭಾಗದ ಗದ್ದೆಯಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತೆ.
ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯ ಜಾತ್ರೆಯಲ್ಲಿ ಎರಡು ಗ್ರಾಮಸ್ಥರು ಇದೇ ರೀತಿ ಆಚರಣೆಯನ್ನು ಮಾಡುತ್ತಾರೆ. ಕತ್ತಲಲ್ಲಿ ಬೆಂಕಿಯ ಚೆಂಡುಗಳು ಗದ್ದೆಯಲ್ಲಿ ಇತ್ತಿಂದತ್ತ ಅತ್ತಿಂದತ್ತ. ರವಾನೆಯಾಗುತ್ತದೆ. ಇದನ್ನು ನೋಡೋದಕ್ಕೆ ಅಧಿಕ ಸಂಖ್ಯೆಯ ಭಕ್ತಾದಿಗಳು ಸೇರುತ್ತಾರೆ. ಅದೆಷ್ಟೋ ವರ್ಷಗಳ ಸಂಪ್ರದಾಯ ಇಂದಿಗೂ ಮುಂದುವರಿದು ಬಂದಿದೆ.