ಉಡುಪಿ: ಇಸ್ಪೀಟು ಜುಗಾರಿ ಅಂದರ್-ಬಾಹರ್ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದ ಘಟನೆ ಬೀಡನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗ ಮಂದಿರದ ಬಳಿ ನಡೆದಿದೆ.

ಬಂಧಿತರನ್ನು ನಾಗರಾಜ್, ಯಮುನಪ್ಪ, ಮಂಜುನಾಥ, ಅಮಿನ್ ಸಾಬ್, ಸಿದ್ದಪ್ಪ, ಗುರು, ಪರಶುರಾಮ ಎಂದು ಗುರುತಿಸಲಾಗಿದೆ.
ಬೀಡನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗ ಮಂದಿರದ ಬಳಿ ಮಾ.16ರಂದು ಇಸ್ಪೀಟು ಜುಗಾರಿ ಅಂದರ್-ಬಾಹರ್ ಆಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು 32,800ರೂ. ನಗದು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.