ಉಪ್ಪಿನಂಗಡಿ: ರಾಜ್ಯವನ್ನೇ ಬೆಚ್ಚಿಬಿಳಿಸಿದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೈ ಪಾತಾಜೆ ತಂಡದಿಂದ ತಲ್ವಾರ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ನೆಕ್ಕಿಲಾಡಿ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿನ್ನೆ ಸಂಜೆ ಸ್ಕೂಟರ್ ನಲ್ಲಿ ಇಬ್ಬರು ಹೋಗುತ್ತಿರುವಾಗ ತಡೆದು ತಲ್ವಾರ್ ನಿಂದ ಕಡಿದಿದ್ದಾರೆ ಎಂಬ ಮಾಹಿತಿ ದೊರಕಿದೆ.
ಗಂಭೀರ ಗಾಯಗೊಂಡು ಇಬ್ಬರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರು ದೀಕ್ಷಿತ್ ಮತ್ತು ಜಯರಾಮ ಎಂದು ತಿಳಿದು ಬಂದಿದೆ.ಗಂಭೀರ ಗಾಯಗೊಂಡ ದೀಕ್ಷಿತ್ ಎಂಬಾತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ದೊರಕಿದೆ.
ಕೆಲ ದಿನಗಳ ಹಿಂದೆ ಕೇರಳ ದೇವಸ್ಥಾನಕ್ಕೆ ಕನ್ನಡ ಚಿತ್ರನಟ ದರ್ಶನ್ ಜೊತೆ ಪ್ರಜ್ವಲ್ ರೈ ಭೇಟಿ ನೀಡಿದ ಫೋಟೋ ವೈರಲ್ ಆಗಿತ್ತು. ಕೇರಳದಲ್ಲಿ ರೇಣುಕಾ ಸ್ವಾಮಿ ಕೊಲೆ ಆರೋಪಿಯೊಂದಿಗೆ ಜಲೀಲ್ ಕರೋಪಾಡಿ ಕೊಲೆ ಆರೋಪಿ ಎಂಬ ಶೀರ್ಷಿಕೆಯಲ್ಲಿ ಮಾಧ್ಯಮದಲ್ಲಿ ವರದಿಯಾಗಿತ್ತು.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತಿದ್ದಾರೆ.