ಕಟೀಲು: ತಂತ್ರಜ್ಞಾನ ಶೀಘ್ರಗತಿಯಲ್ಲಿ ಪ್ರಗತಿಯಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ನೋಡಿ. ಇನ್ಮುಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೇವಿಯ ಪ್ರಸಾದವೂ ಕೂಡಾ ಆನ್ಲೈನ್ ಮೂಲಕ ಮನೆ ಬಾಗಿಲಿಗೇ ಬಂದು ತಲುಪಲಿದೆ.

ಈಗಾಗಲೇ ರಾಜ್ಯದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಈ ಆನ್ಲೈನ್ ಸೇವೆಗಳು ಆರಂಭವಾಗಿದೆ. ಮುಜರಾಯಿ ಇಲಾಖೆಯ ಇ- ಪ್ರಸಾದ ಯೋಜನೆಗೆ ಡಿಮ್ಯಾಂಡ್ ಕೂಡಾ ಹೆಚ್ಚಾಗಿದೆ.
ಆದ್ದರಿಂದ ಇನ್ನಷ್ಟು ದೇವಾಲಯಗಳ ಪ್ರಸಾದವನ್ನು ಆನ್ಲೈನ್ ಮೂಲಕವೇ ಮನೆ ಮನೆಗೆ ತಲುಪಿಸಲು ಇಲಾಖೆ ಮುಂದಾಗಿದ್ದು ಬೇರೆ ಭಾಗದ ಜನರಿಗೂ ಈ ಸೇವೆಯಿಂದ ಇನ್ನಷ್ಟು ಅನುಕೂಲವಾಗಲಿದೆ.