ಮಂಗಳೂರು: ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಇನಾಯತ್ ಅಲಿ ಅವರ ಸಾರಥ್ಯದಲ್ಲಿ ಎರಡನೇ ವರ್ಷದ ಗುರುಪುರ ಮೂಳೂರು ಅಡ್ಡೂರು ಜೋಡುಕರೆ ಕಂಬಳ ನಾಳೆ ನಡೆಯಲಿದೆ.

ಅದ್ಧೂರಿಯಾಗಿ ಕಂಬಳ ಆಯೋಜನೆಗೊಂಡಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಂಬಳದ ಸಮಾರೋಪದಲ್ಲಿ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸಲಿದ್ದಾರೆ.
ಕಂಬಳದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ, ಮಳೆ ಬಂದಲ್ಲಿ ಸಮಸ್ಯೆ ಆಗದಂತೆ ಜರ್ಮನ್ ಟೆಂಟ್ ವ್ಯವಸ್ಥೆ ಕೂಡಾ ಮಾಡಲಾಗಿದೆ.