ಕಾರ್ಕಳ: ಉಡುಪಿ – ಕಾರ್ಕಳ ರಸ್ತೆಯ ಕೊಟ್ನಕಟ್ಟೆಯ ಸಮೀಪ ಬಸ್ ಮತ್ತು ಪಿಕ್’ಆಪ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಿಕ್’ಆಪ್ ವಾಹನದಲ್ಲಿದ್ದ ಒರ್ವ ವ್ಯಕ್ತಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ ಆದರೆ ಅದು ಇನ್ನು ಕೂಡ ಧೃಡಪಟ್ಟಿಲ್ಲ.

ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಬಸ್ ಉಡುಪಿಯಿಂದ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿತ್ತು.ಪಿಕ್’ಆಪ್ ಕಾರ್ಕಳದ ಕಡೆಯಿಂದ ಬರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.