Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಪ್ರತಿಭಟನೆಕಾರರನ್ನು ಸಾಗಿಸಿಲ್ಲ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ ವೀಡಿಯೊ- ಪೊಲೀಸ್‌ ಕಮಿಷನರ್‌ ಸ್ಪಷ್ಟನೆ
    ಇತ್ತೀಚಿನ ಸುದ್ದಿ

    ಮಂಗಳೂರು: ಪ್ರತಿಭಟನೆಕಾರರನ್ನು ಸಾಗಿಸಿಲ್ಲ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ ವೀಡಿಯೊ- ಪೊಲೀಸ್‌ ಕಮಿಷನರ್‌ ಸ್ಪಷ್ಟನೆ

    April 20, 2025
    Share

    ಮಂಗಳೂರು: ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ವಾಹನದಲ್ಲೇ ಪ್ರತಿಭಟನೆಕಾರರಿಗೆ ಡ್ರಾಪ್‌ ಕೊಡಲಾಗಿತ್ತು ಎಂಬ ವೀಡಿಯೊ ವೈರಲ್‌ ಆಗಿತ್ತು. ಹೆದ್ದಾರಿ ಬಂದ್ ಮಾಡಿದ ಪ್ರತಿಭಟನೆಕಾರರನ್ನು ಎಸಿಪಿ ವಾಹನದಲ್ಲೇ ಕರೆದೊಯ್ದಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆರೋಪಿಸಲಾಗಿತ್ತು. ಆದರೆ ಇದು ಪ್ರತಿಭಟನೆಕಾರರಿಗೆ ಡ್ರಾಪ್‌ ಕೊಟ್ಟದ್ದಲ್ಲ, ಗಾಯಗೊಂಡ ಓರ್ವ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೀಡಿಯೊ ಎಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ.

    ಕಾರ್ಯಕ್ರಮ ಮುಗಿದ ಬಳಿಕ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಾಹನದಲ್ಲೇ ಕರೆದೊಯ್ದರು ಎಂಬ ವೀಡಿಯೊಕ್ಕೆ ಬಹಳ ಆಕ್ರೋಶ ವ್ಯಕ್ತವಾಗಿತ್ತು. ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರ ಸರ್ಕಾರಿ ಕಾರಿನಲ್ಲಿ ಕೆಲ ಪ್ರತಿಭಟನಾಕಾರರನ್ನು ಕರೆದೊಯ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.ಇದು ಪ್ರತಿಭಟನಾಕಾರರನ್ನು ಸಾಗಿಸಿದ್ದು ಅಲ್ಲ. ಟೆಂಪೋ ಟ್ರಾವೆಲ್ಲರ್‌ ವಾಹನ ಬಾಲಕನೊಬ್ಬನಿಗೆ ಗುದ್ದಿತ್ತು. ಬಾಲಕನ ಕಾಲಿನ ಅದರ ಮೇಲೆ ಚಕ್ರ ಹರಿದು ಹೋಗಿತ್ತು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಎಸಿಪಿ ತಮ್ಮ ಕಾರಿನಲ್ಲಿ ಸಾಗಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗುವುದು ಪೊಲೀಸರ ಕರ್ತವ್ಯ. ಟೆಂಪೊ ಟ್ರಾವೆಲರನ್ನು ಪೊಲೀಸರು ವಶಪಡಿಸಿಕೊಂಡು ಚಾಲಕನ ವಿರುದ್ಧ ಕೇಸ್‌ ದಾಖಲಿಸಿಕೊಂಡಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಾಗ ಅವನ ಜೊತೆ ಇತರರು ಇದ್ದರು ಎಂದು ನಗರ ಪೊಲೀಸ್‌ ಆಯುಕ್ತರು ಈ ಸ್ಪಷ್ಟೀಕರಣ ನೀಡಿದ್ದಾರೆ.

    ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇದ್ದ ಮೈದಾನದಿಂದ ಹೊರಬಂದು ಹೆದ್ದಾರಿಯಲ್ಲಿ ನಿಂತಿದ್ದರು. ಪ್ರತಿಭಟನೆಗಾಗಿ ಹೆದ್ದಾರಿ ಬಂದ್ ಮಾಡುವ ಪ್ಲಾನ್ ಪೊಲೀಸರು ಮೊದಲು ಮಾಡಿದ್ದರೂ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹೆದ್ದಾರಿ ಬಂದ್ ಮಾಡದೆ ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದರು. ಆದರೆ ಮೈದಾನದಲ್ಲಿರಬೇಕಾದ ಪ್ರತಿಭಟನಾಕಾರರು ಹೆದ್ದಾರಿಗೆ ಬಂದು ನಿಂತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೆಲ ಗಂಟೆಗಳ ಕಾಲ ಸುಮಾರು 10 ಕಿ.ಮೀ ದೂರದವರೆಗೆ ವಾಹನಗಳು ನಿಂತಿದ್ದವು

    Post Views: 195

    Related Posts

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.