ಮಂಗಳೂರು: ಬಜಾಲ್ ಕಟ್ಟಪುಣಿಯಲ್ಲಿ ವಾಸವಾಗಿದ್ದ ಕೊಪ್ಪಳ ಮೂಲದ ಶಿವಪುತ್ರಪ್ಪ ಎಂಬವರ ಪುತ್ರಿ ಯಲ್ಲಮ್ಮ (18) ಅವರು ಎ.14ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ.

ಶಿವಪುತ್ರಪ್ಪ ಬೆಳಗ್ಗೆ 7ಕ್ಕೆ ಉಳ್ಳಾಲ ಆಜಾದ್ ನಗರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಕೂಡ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪುತ್ರಿ ಯಲ್ಲಮ್ಮ ಮನೆಯಲ್ಲಿದ್ದಳು. ಸಂಜೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿದ್ದು ಯಲ್ಲಮ್ಮ ಮನೆಯಲ್ಲಿ ಇರಲಿಲ್ಲ. ಬೀಗದ ಕೈ ಪಕ್ಕದಲ್ಲಿತ್ತು. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಎಲ್ಲ ಕಡೆ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ. 4 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಪೂರ ಶರೀರ, ದುಂಡು ಮುಖ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ.
ಈ ಯುವತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.