ಮುಂಬೈನಿಂದ ಉಡುಪಿ-ಶಿರ್ವ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಸರ್ಕಾರಿ ಐರಾವತ ಬಸ್ಸಿನಲ್ಲಿ ಕೂತಿದ್ದ ಪ್ರಯಾಣಿಕರೋರ್ವರು ಪ್ರಯಾಣ ಮಾಡುತ್ತಿದ್ದಾಗಲೇ ಕೂತಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.

ಕುಮಟಾ ಮೂಲದ ಪ್ರಯಾಣಿಕ ನಲ್ವತ್ತೈದು ವರ್ಷ ವಯಸ್ಸಿನ ಸತ್ಯ ಭಂಢಾರಿ ಮೃತ ದುರ್ದೈವಿ. ಇವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಇವರ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.