ಮಲ್ಪೆ: ಸಾರ್ವಜನಿಕ ಸ್ಥಳದಲ್ಲಿ ಹಣದ ಬೆಟ್ಟಿಂಗ್ ಮಾಡಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಸಿಕ್ಕ ಮಾಹಿತಿಯ ಮೇರೆಗೆ ಪೊಲೀಸರು ದಿಢೀರನೆ ಜುಗಾರಿ ಅಡ್ಡಕ್ಕೆ ದಾಳಿ ನಡೆಸಿರುವ ಘಟನೆ ಉಡುಪಿಯ ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮಬೈದರ್ಕಳ ಗರಡಿಯ ಬಳಿ ನಡೆದಿದೆ.

ಶರತ್, ಸಂದೇಶ, ಜಯಕರ, ರಮೇಶ, ಅರುಣ್ ಕುಮಾರ್ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರೋಪಿಗಳಾಗಿದ್ದಾರೆ. ಪೊಲೀಸರು ಈ ಸ್ಥಳದಲ್ಲಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳನ್ನು ಹಿಂಸಾತ್ಮಕವಾಗಿ ಕಾಲಿಗೆ ಬಾಳು ಕತ್ತಿಯನ್ನು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದುದರ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.
ದಾಳಿ ನಡೆಸಿದಾಗ ಹಣ ಸ್ಥಳದಲ್ಲಿಯೇ ಎಸೆದು ಕೆಲವರು ಎಸ್ಕೇಪ್ ಆಗಿದ್ದಾರೆ. ಸುಮಾರು ಹತ್ತು ಸಾವಿರ ರೂ ಮೌಲ್ಯದ ಕೋಳಿಗಳು, ಕಾಲಿಗೆ ಕಟ್ಟಿದ್ದ ಎರಡು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.