ಮಂಗಳೂರು: ಇತ್ತೀಚಿಗೆ ಕರಾವಳಿಯಲ್ಲಿ ಗೋಹತ್ಯೆ, ಅಕ್ರಮ ಗೋಸಾಗಾಟ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕೂಳೂರು ಸೇತುವೆಯ ಬಳಿಯಿಂದ ತಣ್ಣೀರು ಬಾವಿಗೆ ಹೋಗುವ ಮಾರ್ಗದಲ್ಲಿ ಯುವಕರು ರಾಜಾರೋಷವಾಗಿ ಅಕ್ರಮ ಗೋಸಾಗಾಟಕ್ಕೆ ಯತ್ನಿಸುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಯುವಕರು ಸಂಶಯ ಬಾರದ ರೀತಿಯಲ್ಲಿ ದನಗಳಿಗೆ ಆಹಾರ ನೀಡುತ್ತಾ ಹಿಡಿದು ವಾಹನದಲ್ಲಿ ತುಂಬಿಸಲು ಯತ್ನಿಸುತ್ತಿದ್ದಾಗ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.