ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭವತಿಯಾಗಿದ್ದು, ಆರೋಪಿ ಯುವಕನ ವಿರುದ್ಧ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.

ದೂರಿನ ಹಿನ್ನೆಲೆಯಲ್ಲಿ ಆರೋಪಿ ಶಿರ್ಲಾಲು ಗ್ರಾಮದ ಸನತ್ (28) ಎಂಬ ಯುವಕನನ್ನು ವೇಣೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಆಗಾಗ್ಗೆ ಮನೆಗೆ ಬಂದವನು ಬಾಲಕಿ ಜೊತೆ ಸಲುಗೆಯಿಂದ ಇದ್ದ. ಆಕೆಯ ಜನ್ಮ ದಿನದಂದು ಬಂದಾತ ಅದೇ ದಿನ ರಾತ್ರಿ ಅಲ್ಲೇ ಉಳಿದುಕೊಂಡಿದ್ದು, ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಕಳವಳಕಾರಿ ವೀಡಿಯೋ ವೈರಲ್ ಬಳಿಕ ನಿರಂತರವಾಗಿ ಆಕೆಗೆ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾನೆ. ಇದೀಗ ಆಕೆ ಗರ್ಭಿಣಿಯಾಗಿದ್ದು, ಆರೋಪಿ ಸನತ್ ವಿರುದ್ಧ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾಳೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.