ಮಂಗಳೂರು : ರಕ್ಷಾಬಂಧನ ಕಟ್ಟಿಕೊಂಡು ಬಂದಿದ್ದ ವಿಧ್ಯಾರ್ಥಿಗಳ ಕೈಯಲ್ಲಿರುವ ರಕ್ಷಾ ಬಂಧನವನ್ನುಶಿಕ್ಷಕರು ತುಂಡರಿಸಿ ಹಾಕಿದ ಘಟನೆ ಮಂಗಳೂರಿನ ಕಾಟಿಪಳ್ಳದಲ್ಲಿರುವ ಚರ್ಚ್ ಶಾಲೆಯೊಂದರಲ್ಲಿ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.
ಹಿಂದೂ ಸಮುದಾಯದ ಈ ಆಚರಣೆಗೆ ಅವಮಾನ ಮಾಡಿದ ಚರ್ಚ್ ಶಾಲೆಯ ವಿರುದ್ಧ ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶಾಲೆಯ ಮುಂದೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಘಟನೆ ನಡೆದಿತ್ತು. ಹಿಂದೂ ಸಂಘಟನೆಯ ಪ್ರಮುಖರು ಕೂಡ ಶಾಲೆಯ ವರ್ತನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪೋಷಕರು- ಹಿಂದೂ ಸಮಾಜದ ಪ್ರಮುಖರು ಶಾಲೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿದರು. ಶಾಲಾ ಆಡಳಿತ ಮಂಡಳಿ ಘಟನೆಯ ಕುರಿತಂತೆ ಕ್ಷಮೆ ಕೇಳಿದ್ದು, ಪ್ರಕರಣ ಸುಖಾಂತ್ಯವಾಗಿದೆ.
ಬಳಿಕ ಶಾಲೆಯಲ್ಲಿ ಶಾಲೆಯ ಪ್ರಾಶುಂ ಪಾಲರು ಮಾತನಾಡಿ ನನಗೆ ಅರಿವಿಲ್ಲದೇ ಈ ಘಟನೆ ಸಂಭವಿಸಿದೆ. ನಮ್ಮ ಶಾಲೆಯಲ್ಲಿ ತಾವುದೇ ತಾರತಮ್ಯವಿಲ್ಲ. ಸಮಾರಸ್ಯತೆಯನ್ನು ಮೂಡಿಸುವ ಕೆಲಸ ಮಾಡುತ್ತೇವೆ. ತಿಳಿಯದೆ ಶಿಕ್ಷಕಿಯೊಬ್ಬರು ಹೀಗೆ ಮಾಡಿರಬೇಕು. ಕೂಡಲೇ ಶಿಕ್ಷಕಿಯಿಂದಲೇ ಕ್ಷಮೇ ಯಾಚಿಸಲು ತಿಳಿಸಿದ್ದಾರೆ. ಬಳಿಕ ಶಿಕ್ಷಕಿ ಪೋಷಕರ ಎದುರೇ ಕ್ಷಮೆಯನ್ನು ಯಾಚಿಸಲಾಗಿದೆ.