ಬೆಂಗಳೂರು : ವಿಶ್ವ ಅಂಗಾಂಗ ದಾನ ದಿನಾಚರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಸ್ವತಃ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ಸಾವನ್ನಪ್ಪಿದ ಬಳಿಕವೂ ಎಂಟು ಮಂದಿ ಜನರಿಗೆ ಬದುಕು ಕಲ್ಪಿಸಿಕೊಡಲು ಅಂಗಾಂಗ ದಾನದ ಮೂಲಕ ಸಾಧ್ಯ. ಆ ಮೂಲಕ ಸತ್ತ ಮೇಲೆಯೂ ಬದುಕಿರಬಹುದು. ಅಂಗಾಂಗ ದಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.ಮಾನವ ಜನ್ಮ ಶ್ರೇಷ್ಠವಾದುದು. ಆ ಶ್ರೇಷ್ಠತೆಯನ್ನು ಉಳಿಸುವ ಕೆಲಸ ನಮ್ಮದಾಗಬೇಕು. ಸಾವಿನ ನಂತರವೂ ಬದುಕಬೇಕೆಂದರೆ ಅಂಗಾಂಗಗಳನ್ನು ದಾನ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನತೆ ಮಹತ್ವದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.