Facebook Twitter Instagram
    Thursday, April 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಜ್ಯ ಸುದ್ದಿ»ಕುಂದಾಪುರ: ನಾಪತ್ತೆಯಾದ ಮಹಿಳೆ ಹೀನಾ ಕೌಸರ್; ಮೂರು ದಿನ ಕಳೆದರೂ ಸಿಗದ ಸುಳಿವು
    ರಾಜ್ಯ ಸುದ್ದಿ

    ಕುಂದಾಪುರ: ನಾಪತ್ತೆಯಾದ ಮಹಿಳೆ ಹೀನಾ ಕೌಸರ್; ಮೂರು ದಿನ ಕಳೆದರೂ ಸಿಗದ ಸುಳಿವು

    June 12, 2025
    Share

    ಕುಂದಾಪುರ, ಜೂ. 12 : ಕುಂದಾಪುರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್(32) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

    ಪೊಲೀಸರು ಹೀನಾ ಕೌಸರ್ ಪತ್ತೆಗಾಗಿ ಎಲ್ಲ ಆಯಾಮಗಳಿಂದಲೂ ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆಯ ಮೊಬೈಲ್ ಸಹ ಸ್ವಿಚ್‌ಆಫ್ ಆಗಿದೆ. ಪತ್ನಿ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಮಹಮ್ಮದ್ ಇಕ್ಬಾಲ್ ಊರಿಗೆ ಮರಳಿದ್ದಾರೆ.ಜೆಎಲ್‌ಬಿ ರಸ್ತೆಯ ಮನೆಯಲ್ಲಿ ತಾಯಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ವಾಸವಿದ್ದ ಹೀನಾ ಕೌಸರ್ ಜೂ. 9ರ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟಿದ್ದಾರೆ. ಸ್ಕೂಟಿಯನ್ನು ಕೋಡಿಯ ಸೇತುವೆ ಬಳಿ ಇಟ್ಟು, ಅದರಲ್ಲಿ ಡೆತ್ ನೋಟ್ ಕೂಡ ಬರೆದು ಚಪ್ಪಲಿ ಸಹ ಅಲ್ಲಿಯೇ ಬಿಟ್ಟು, ಪಂಚಗಂಗಾವಳಿ ನದಿಗೆ ಹಾರಿರಬಹುದು ಎಂದು ಬಿಂಬಿಸುವಂತೆ ಕಥೆ ಹೆಣೆದಿರುವುದಾಗಿ ಎನ್ನಲಾಗಿದೆ.ಆಕೆಯ ಪತ್ತೆಗಾಗಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ದಿನವಿಡೀ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ನಿಜಕ್ಕೂ ಆಕೆ ನದಿಗೆ ಹಾರಿಲ್ಲ, ಅದು ಸುಳ್ಳು ಕಥೆ ಹೆಣೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಕಾಕತಾಳಿಯವೆಂಬಂತೆ ಜೂ. 9ರಂದೇ ಹೆಮ್ಮಾಡಿಯ ಸಂತೋಷ್ ನಗರ ನಿವಾಸಿ ಸಾಹಿಲ್ (27) ಎಂಬಾತ ಕೂಡ ನಾಪತ್ತೆಯಾಗಿದ್ದಾನೆ. ಆತನಿಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

    Post Views: 450

    BreakingNews CrimeNews karnataka PoliceInvestigation

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.