Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಡುಪಿ: ಆನ್‌ಲೈನ್ ಟ್ರೇಡಿಂಗ್ ವಂಚನೆ- ಆರು ಮಂದಿ ಬಂಧನ
    ಇತ್ತೀಚಿನ ಸುದ್ದಿ

    ಉಡುಪಿ: ಆನ್‌ಲೈನ್ ಟ್ರೇಡಿಂಗ್ ವಂಚನೆ- ಆರು ಮಂದಿ ಬಂಧನ

    September 5, 2025
    Share

    ಉಡುಪಿ : ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಲಾಭದ ಆಮಿಷವೊಡ್ಡಿ ಸುಮಾರು 44 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಭಂದಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಆರೋಪಿಗಳನ್ನು ಮೈಸೂರಿನ ಶೋಯಬ್‌ ಅಹಮದ್‌ (28) ಹಾಗೂ ಮುದ್ದಾಸಿರ್‌ ಅಹಮದ್‌ (40) ಎಂದು ಗುರುತಿಸಲಾಗಿದೆ.

    ಉಡುಪಿಯ ಶಿವಳ್ಳಿ ಗ್ರಾಮದ ತೀರ್ಥರಾಜ ಶೆಣೈ(51) ಎಂಬುವವರು ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತೀರ್ಥರಾಜ ಶೆಣೈ ನೀಡಿದ ದೂರಿನನ್ವಯ “Capital Gains Crew ಎಂಬ ಟೆಲಿಗ್ರಾಂ ಗ್ರೂಪ್ ಗೆ Adi Nihal ಎಂಬ ಅಪರಿಚಿತ ವ್ಯಕ್ತಿ ಸೇರ್ಪಡೆಗೊಳಿಸಿದ್ದಾನೆ. ಬಳಿಕ Fidility Institutional Partners F – 101 ಗ್ರೂಪ್‌ ಗೆ ಸೇರಿಸಿದ್ದು, ಈ ಗ್ರೂಪ್‌ನಲ್ಲಿ ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. ಬಳಿಕ ತೀರ್ಥರಾಜ ಅವರು ತಮ್ಮ ಮತ್ತು ಅವರ ತಾಯಿಯ ಬ್ಯಾಂಕ್‌ ಖಾತೆಯಿಂದ 2024ರ ಡಿಸೆಂಬರ್‌ 19 ರಿಂದ 2025ರ ಜನವರಿ 7 ರವರೆಗೆ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 44 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ. ದೂರುದಾರರು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲಿ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್‌ ಶಂಕರ್‌ ಆದೇಶದಂತೆ ಹಾಗೂ ಹೆಚ್ಚುವರಿ ಪೊಲೀಸ್‌‌‌‌ ಅಧೀಕ್ಷಕ ಸುಧಾಕರ ನಾಯಕ್‌ ಮತ್ತು ಸಹಾಯಕ ಪೊಲೀಸ್‌ ಉಪಾಧೀಕ್ಷಕ ಡಾ. ಹರ್ಷ ಪ್ರಿಯಂವದ ಅವರ ನಿರ್ದೇಶನ ಮೇರೆಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡವು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

    ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ₹2 ಲಕ್ಷ ನಗದು ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    Post Views: 128

    Related Posts

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.