ಉಪ್ಪಿನಂಗಡಿ: ಮಹಿಳೆಗೆ ತೊಂದರೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 12 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಇಮ್ರಾನ್ ಖಾನ್ (36) ಬಂಧಿತ ಆರೋಪಿ.
ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು, ಬೆಂಗಳೂರು ನಗರದ ಕೆ,ಜಿ ಹಳ್ಳಿ ಎಂಬಲ್ಲಿಂದ 13/9/2025 ರಂದು ದಸ್ತಗಿರಿ ಮಾಡಿ ದಿನಾಂಕ 14/9/2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿದೆ



