ಮಂಡ್ಯ: ಚಿನ್ನದ ಉದ್ಯಮಿಯಿಂದ ಹನಿಟ್ರ್ಯಾಪ್ ಮಾಡಿ ಸುಮಾರು 50 ಲಕ್ಷ ರೂ.ಹಣ ಸುಲಿಗೆ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ವಿವಿ ರಸ್ತೆಯಲ್ಲಿರುವ ಶ್ರೀನಿಗೋಲ್ಡ್‌ನ ಮಾಲಕ ಮತ್ತು ಪಕ್ಷವೊಂದರ ವ್ಯಾಪಾರ ವಿಭಾಗದ ನಾಯಕ ಜಗನ್ನಾಥ್ ಎಸ್ ಗೆ ಈ ರೀತಿ ಹನಿಟ್ರ್ಯಾಪ್ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿ ಮಂಡ್ಯದ ಸುಭಾಷ್ ನಗರದ 8ನೇ ಕ್ರಾಸ್ ನಿವಾಸಿ ಸಲ್ಮಾಬಾನು ಹಾಗೂ ಜಯಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿಗೆ ತೆರಳಲು ಮಂಡ್ಯದ ಸಾರಿಗೆ ಬಸ್ ನಿಲ್ದಾಣದಲ್ಲಿ ಜಗನ್ನಾಥ್ ಎಸ್. ಶೆಟ್ಟಿ ನಿಂತಿದ್ದಾಗ ಆರೋಪಿಗಳಾದ ಸಲ್ಮಾಬಾನು ಹಾಗೂ ಜಯಂತ್ ಸೇರಿ ಇತರರು ಕಾರಿನಲ್ಲಿ ಬಂದು ಪರಿಚಯ ಮಾಡಿಕೊಂಡು ತಾವು ಮೈಸೂರಿಗೆ ತೆರಳುತ್ತಿದ್ದು,ಬನ್ನಿ ಎಂದು ಕಾರು ಹತ್ತಿಸಿಕೊಂಡಿದ್ದಾರೆ.ಅನಂತರ ನಮ್ಮ ಸ್ನೇಹಿತ ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಚಿನ್ನದ ಬಿಸ್ಕೆಟ್ ತಂದಿದ್ದಾನೆ. ಅದನ್ನು ಪರೀಕ್ಷಿಸಿ ಅಸಲಿಯೇ, ನಕಲಿಯೇ ಎಂದು ಹೇಳಿ ಎಂದು ಜಗನ್ನಾಥ್ ಗೆ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾರೆ.
ಚಿನ್ನ ಪರಿಶೀಲಿಸಲು 5 ನಿಮಿಷ ಬನ್ನಿ ಎಂದು ಲಾಡ್ಜ್ಗೆ ಕರೆದೊಯ್ದರು.ರೂಮಿಗೆ ಬಂದ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದರು.ಸ್ವಲ್ಪ ಹೊತ್ತಿನಲ್ಲಿ ರೂಮಿಗೆ 22ರಿಂದ 25 ವರ್ಷದ ಯುವತಿ ಬಂದಿದ್ದಳು.ಕೆಲವೇ ನಿಮಿಷಗಳಲ್ಲಿ ಸಲ್ಮಾಬಾನು,ಜಯಂತ್ ಹಾಗೂ ಇತರರು ಬಂದು ನಿನ್ನ ವಿಡಿಯೋ ಸಿಕ್ಕಿದೆ ಹಣ 4 ಕೋಟಿ ಕೊಡು ಎಂದು ಆಗ್ರಹಿಸಿದ್ದಾರೆ.ಇದರಿಂದ ಕಂಗಾಲಾದ ಜಗನ್ನಾಥ್ ಆರೋಪಿಗಳಿಗೆ 50 ಲಕ್ಷ ರೂ.ನೀಡಿದ್ದರು. ಇದೀಗ ಜಗನ್ನಾಥ್ ನೀಡಿದ ಕೇಸ್ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.