Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಇನ್ಸ್ಟಾಗ್ರಾಮ್ ಜಾಹೀರಾತು: ಹೂಡಿಕೆಯ ಹೆಸರಿನಲ್ಲಿ 4.2 ಲಕ್ಷ ಪಂಗನಾಮ
    ಇತ್ತೀಚಿನ ಸುದ್ದಿ

    ಇನ್ಸ್ಟಾಗ್ರಾಮ್ ಜಾಹೀರಾತು: ಹೂಡಿಕೆಯ ಹೆಸರಿನಲ್ಲಿ 4.2 ಲಕ್ಷ ಪಂಗನಾಮ

    October 4, 2025
    Share

    ಉಡುಪಿ: ಹೂಡಿಕೆಯ ಹೆಸರಿನಲ್ಲಿ 4.2 ಲಕ್ಷ ರೂಪಾಯಿಯನ್ನು ವಂಚಿಸಿದ ಕುರಿತು ವರದಿಯಾಗಿದೆ. ನಾಝಿಯಾ (39) ಎನ್ನುವವರು ವಂಚೊನೆಗೊಳಗಾದ ಸಂತ್ರಸ್ಥೆ.

    ಇನ್ಸ್ಟಾಗ್ರಾಮ್ ನಲ್ಲಿ Afreen Halaal Investment ಎಂಬ ಪ್ರೊಫೈಲ್‌ ನಲ್ಲಿ ವಿಡಿಯೋವೊಂದರಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದಾದ ಜಾಹೀರಾತನ್ನು ವೀಕ್ಷಿಸಿದ್ದಾರೆ. ನಂತರ ಪ್ರೋಫೈಲ್‌ ವ್ಯಕ್ತಿಗೆ ಹೂಡಿಕೆ ಮಾಡುವ ಬಗ್ಗೆ ತಿಳಿಯಲು ಸಂದೇಶವನ್ನು ಕಳುಹಿಸಿದ್ದು, ಆನಂತರ ಆರೋಪಿಯು 9477953918   ನಂಬ್ರದಿಂದ ವಾಟ್ಸಪ್‌ ಗೆ ಬೇರೆ–ಬೇರೆ ವ್ಯಕ್ತಿಗಳು ಟ್ರೇಡಿಂಗ್‌ ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ್ದ ಟ್ರಾನ್ಸಕ್ಷನ್‌ ಗಳ  ಸ್ಟ್ರೀನ್‌ ಶಾನ್‌ ಗಳನ್ನು ಹೊಂದಿದ ಸಂದೇಶಗಳನ್ನು ಕಳುಹಿಸಿದ್ದಾರೆ.

    ಇದನ್ನು ನಂಬಿದ ಸಂತ್ರಸ್ಥೆ ಟ್ರೇಡಿಂಗ್‌ ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಆರೋಪಿಯು ನೀಡಿದ ಕ್ಯೂ ಅರ್‌ ಕೋಡ್‌ ಗೆ ಅವರು ಮೊದಲ ಬಾರಿಗೆ 2000/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದು, ಇದಾದ ಬಳಿಕ ಆರೋಪಿಯ ಬಳಿ ಲಾಭದ ಹಣವನ್ನು ಕೇಳಿದಾಗ ಆರೋಪಿಯು “ ನೀವು ಮೊದಲ ಬಾರಿ ಹೂಡಿಕೆ ಮಾಡುತ್ತೀದ್ದೀರಿ , ಇದಕ್ಕೆ ಟ್ಯಾಕ್ಸ್‌ ಚಾರ್ಜ್‌ ಬೀಳುತ್ತದೆ ಆನಂತರ ನಿಮಗೆ ಲಾಭದ ಹಣ ದೊರೆಯುತ್ತದೆ ಹಾಗೂ ನೀವು ಇನ್ನು ಜಾಸ್ತಿ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದೆಂದು ಹೇಳಿದ್ದು,” ಪುನಃ ಆರೋಪಿಯು ನೀಡಿದ ಕ್ಯೂಆರ್ ಕೋಡ್‌ ಗೆ 8055/- ರೂಪಾಯಿಗಳನ್ನು ವರ್ಗಾವಣೆ‌ ಮಾಡಿದ್ದು, ಪುನಃ ಆರೋಪಿಯ ಬಳಿ ಲಾಭದ ಹಣವನ್ನು ಕೇಳಿದಾಗ ಆರೋಪಿಯು, “ನೀವು ಹೂಡಿಕೆಯನ್ನು ಮೊದಲ ಬಾರಿ ಮಾಡುತ್ತಿರುವುದರಿಂದ ಮೊದಲು ನೀವು ಟ್ಯಾಕ್ಸ್‌, ವಾಲೆಟ್‌ ಮತ್ತು ಇತರೇ ಚಾರ್ಜಸ್‌ ಗಳಿಗೆ ಹಣವನ್ನು ಕಟ್ಟಬೇಕು ಆನಂತರ  ನಿಮಗೆ ಲಾಭ ಸಿಗುತ್ತದೆ ಎಂದು ಹೇಳಿ ಬ್ರೈನ್‌ ವಾಶ್‌ ಮಾಡಿ ಫಿರ್ಯಾದುದಾರರಿಂದ ಒಟ್ಟಾರೆಯಾಗಿ 4,20,651/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.

    ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 184/2025 ಕಲಂ: 318(4) BNS, 66(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.

    Post Views: 135

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.