ಬೆಳ್ತಂಗಡಿ : ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಕಳೆಂಜ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನುಅನುರಾಜ್ (43) ಎಂದು ಗುರುತಿಸಲಾಗಿದೆ.
ಕಳೆಂಜ ಗ್ರಾಮದ ನಿವಾಸಿ ಬಾಬು ಎಂಬವರ ತಮ್ಮ ಅನುರಾಜ್‌ರವರು ಬಾಬು ಅವರ ಮನೆಯ ಬಳಿ ತನ್ನ ತಾಯಿ ಮತ್ತು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿದ್ದರು.
ಅ.17ರಂದು ಎಂದಿನಂತೆ ಸಂಜೆ ಸಮಯದಲ್ಲಿ ಕಾಯರ್ತಡ್ಕ ಅಂಗಡಿಗೆ ಹೋಗಿ ಸಂಜೆ 6-00 ಗಂಟೆ ಸುಮಾರಿಗೆ ವಾಪಾಸ್ಸು ಮನೆಗೆ ಬಂದು ಮನೆಯಲ್ಲಿದ್ದರು. ರಾತ್ರಿ 8-00 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವನೆ ಮಾಡಿ ಬಾಯಿಯಿಂದ ನೊರೆ ಬರುತ್ತಾ ಮಾತನಾಡಲು ಆಗದ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಉಜಿರೆ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯ ವೈಧ್ಯರು ಪ್ರಥಮ ಚಿಕಿತ್ಸೆ ನೀಡಿ, ಅದೇ ದಿನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅ.18-10-2025 ರಂದು ಸಂಜೆ 4-38 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




