Facebook Twitter Instagram
    Tuesday, September 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಡಿಜಿಟಲ್ ಅರೆಸ್ಟ್ ಗೆ ಯತ್ನ : ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಉಳೀತು ವೃದ್ಧ ದಂಪತಿಯ 84 ಲಕ್ಷ!
    ಇತ್ತೀಚಿನ ಸುದ್ದಿ

    ಡಿಜಿಟಲ್ ಅರೆಸ್ಟ್ ಗೆ ಯತ್ನ : ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಉಳೀತು ವೃದ್ಧ ದಂಪತಿಯ 84 ಲಕ್ಷ!

    December 5, 2025
    Share

    ಮಂಗಳೂರು : ಇತ್ತೀಚಿಗೆ ಇಡಿ ದೇಶದಲ್ಲಿ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಇದೀಗ ಮಂಗಳೂರಲ್ಲಿ ಸಹ ಡಿಜಿಟಲ್ ಅರೆಸ್ಟ್ ಗೆ ಯತ್ನಿಸಲಾಗಿದೆ. ಆದರೆ ಬ್ಯಾಂಕ್ ಮ್ಯಾನೇಜರ್ ನ ಸಮಯ ಪ್ರಜ್ಞೆಯಿಂದ ವೃದ್ಧ ದಂಪತಿಗಳ ಒಟ್ಟು 84 ಲಕ್ಷ ರೂಪಾಯಿ ವಂಚಕರ ಪಾಲಾಗುವುದು ತಪ್ಪಿದೆ. ಆ ಮೂಲಕ ಸೈಬರ್ ವಂಚಕರ ಪ್ಲಾನ್ ಪೂರ್ತಿಉಲ್ಟಾ ಆಗಿದೆ.

    ಮುಲ್ಕಿಯ ದಾಮಸಕಟ್ಟೆ ನಿವಾಸಿಗಳಾದ ಬೆನ್ಡ್ಡಿಕ್ ಪೆರ್ನಾಂಡಿಸ್ (84 ವರ್ಷ) ಹಾಗೂ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ (71 ವರ್ಷ) ರವರಿಗೆ ಡಿಸೆಂಬರ್ 1 ರಂದು ಯಾರೋ ಅಪರಿಚಿತರು ಉತ್ತರ ಪ್ರದೇಶದ ಸಿ.ಐ.ಡಿ ಪೊಲೀಸ್ ಎಂಬ ಸೊಗಿನಲ್ಲಿ ಮೊಬೈಲ್ ಫೋನ್ ವಾಟ್ಸ್​ಆ್ಯಪ್​ ಮೂಲಕ ಸಂಪರ್ಕಿಸಿದ್ದರು. ಅವರುಗಳು 6 ಕೋಟಿ ಮೋಸ ಮಾಡಿರುವುದಾಗಿ ಅವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ, ಸೈಬರ್ ಕಳ್ಳರು ಡಿಜಿಟಲ್ ಅರೆಸ್ಟ್​​ಗೆ ಒಳಪಡಿಸಿದ್ದರು.

    ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ವರ್ಗಾಹಿಸಬೇಕೆಂದು ಸೂಚಿಸಿದ ಮೇರೆಗೆ ಇವರು ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು ಬ್ಯಾಂಕಿಗೆ ವೃದ್ದರು ಹೋಗಿದ್ದರು. ಈ ಸಮಯ ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ರಾಯಸ್ಟನ್ ಅವರು ದೊಡ್ಡ ಮೊತ್ತದ ಹಣವನ್ನು ಏಕೆ ವರ್ಗಾವಣೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ವೃದ್ದದಂಪತಿಗಳು ಸರಿಯಾದ ಉತ್ತರ ನೀಡಿರಲಿಲ್ಲ.

    ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ದ ದಂಪತಿಗಳ ಮನೆಗೆ ತೆರಳಿ ಅವರ ಮೊಬೈಲ್​ ಪರಿಶೀಲಿಸಿದ್ದು, ಈ ಸಮಯ ಅವರು ಡಿಜಿಟಲ್ ಅರೆಸ್ಟ್​​​ಗೆ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ ವರ್ಗಾವಣೆ ಮಾಡದಂತೆ ಸೂಚಿಸಿ, ವೃದ್ದ ದಂಪತಿಗಳಿಗೆ ತಿಳಿವಳಿಕೆ ನೀಡಿ, ವೃದ್ದ ದಂಪತಿಗಳ ಹಣವನ್ನು ಉಳಿಸಿದ್ದಾರೆ. ಇದರ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯವರು ವಿಚಾರಣೆ ನಡೆಸುತ್ತಿದ್ದಾರೆ.

    Post Views: 117

    Related Posts

    ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ- ಮೂವರು ಆರೋಪಿಗಳ ಬಂಧನ

    September 8, 2026

    ತಡರಾತ್ರಿ ಮಂಗಳೂರು ಜೈಲಿಗೆ ಪೊಲೀಸ್ ದಾಳಿ: ಕೈದಿಗಳ ಬಳಿಯಿದ್ದ ಮೊಬೈಲ್‌ಗಳು ಜಪ್ತಿ

    September 8, 2026

    ಕರಾವಳಿ ಕರ್ನಾಟಕ ವಾಣಿಜ್ಯ ಮೇಳ ಮತ್ತು ‘ಮಂಗಳೂರನ್ನು ಬ್ರ್ಯಾಂಡ್ ಆಗಿ ರೂಪಿಸುವ’ ರಚನಾ ದೃಷ್ಟಿಕೋನಕ್ಕೆ ಪ್ರವಾಸೋದ್ಯಮ ಸಚಿವರ ಮೆಚ್ಚುಗೆ

    September 8, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ- ಮೂವರು ಆರೋಪಿಗಳ ಬಂಧನ

    September 8, 2026

    ತಡರಾತ್ರಿ ಮಂಗಳೂರು ಜೈಲಿಗೆ ಪೊಲೀಸ್ ದಾಳಿ: ಕೈದಿಗಳ ಬಳಿಯಿದ್ದ ಮೊಬೈಲ್‌ಗಳು ಜಪ್ತಿ

    September 8, 2026

    ಕರಾವಳಿ ಕರ್ನಾಟಕ ವಾಣಿಜ್ಯ ಮೇಳ ಮತ್ತು ‘ಮಂಗಳೂರನ್ನು ಬ್ರ್ಯಾಂಡ್ ಆಗಿ ರೂಪಿಸುವ’ ರಚನಾ ದೃಷ್ಟಿಕೋನಕ್ಕೆ ಪ್ರವಾಸೋದ್ಯಮ ಸಚಿವರ ಮೆಚ್ಚುಗೆ

    September 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.