Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆಯ ಉದ್ಘಾಟನೆ
    ಇತ್ತೀಚಿನ ಸುದ್ದಿ

    ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆಯ ಉದ್ಘಾಟನೆ

    December 5, 2025
    Share

    ಎಂಸಿಸಿ ಬ್ಯಾಂಕ್, ಮಂಗಳೂರು ಇದರ ನವೀಕೃತ ಕಂಕನಾಡಿ ಶಾಖೆಯನ್ನು ದಿನಾಂಕ 04.12.2025ರಂದು ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯo ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು. ನವೀಕರಿಸಿದ ಶಾಖೆಯನ್ನು ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ, ಉದಾರ ದಾನಿ ಮತ್ತು ವಿಷನ್ ಕೊಂಕಣಿಯ ಪ್ರವರ್ತಕ ಶ್ರೀ ಮೈಕಲ್ ಡಿಸೋಜಾ ಉದ್ಘಾಟಿಸಿ, ಕಂಕನಾಡಿ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾದರ್ ಫೌಸ್ಟಿನ್ ಲೋಬೊ ಆಶೀರ್ವದಿಸಿದರು.

    ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜೆಪ್ಪುವಿನ ಸೇಂಟ್ ಆ್ಯಂಟನಿ ಆಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ.ಕ್ರಾಸ್ತಾ, ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿಸೋಜಾ, ಮತ್ತು ಕೊಂಕಣಿ ಸಾಂಸ್ಕೃತಿಕ ಸಂಸ್ಥೆ (ಕೆಸಿಒ) ಅಧ್ಯಕ್ಷ ಶ್ರೀ ಲಿಯೋ ರೋಡ್ರಿಗಸ್, ಮುಖ್ಯ ಅತಿಥಿಗಳಾಗಿದ್ದರು.

    ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಕಂಕನಾಡಿ ಶಾಖೆಯ ನವೀಕರಣದ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವನ್ನು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ ಸ್ಪಷ್ಟ ದೃಷ್ಟಿಕೋನದೊಂದಿಗೆ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲಾ 16 ಶಾಖೆಗಳನ್ನು ನವೀಕರಿಸಿದೆ. ಗ್ರಾಹಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಕಂಕನಾಡಿ ಶಾಖೆಯು 54 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಗ್ರಾಹಕರು ತಮ್ಮ ವಹಿವಾಟುಗಳನ್ನು ಸಂತೋಷದಾಯಕವಾಗಿ ನಡೆಸಲು ಅನುಕೂಲವಾಗುವಂತೆ ಶಾಖೆಯನ್ನು ನವೀಕರಿಸಲಾಗಿದೆ ಎಂದು ಅವರು ಹೇಳಿದರು.

    ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಕೇವಲ 16 ಶಾಖೆಗಳಿದ್ದು, ಕಳೆದ 7 ವರ್ಷಗಳಲ್ಲಿ, 22 ವರ್ಷಗಳ ನಂತರ ಐದು ಹೊಸ ಶಾಖೆಗಳನ್ನು ತೆರೆಯಲಾಗಿದೆ. ಆರ್‌ಬಿಐ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಪ್ರಸ್ತುತ ಆಡಳಿತ ಮಂಡಳಿಯು 2018 ರಲ್ಲಿ ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿoದ ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳನ್ನು ಪೂರೈಸಿದ್ದು, ಇಂದು, ಒಟ್ಟು 21 ಶಾಖೆಗಳು ಮತ್ತು 15 ಎಟಿಎಂಗಳನ್ನು ಹೊಂದಿದೆ. ಮುಂದಿನ ಹಣಕಾಸು ವರ್ಷದಲ್ಲಿ ದೇರಳಕಟ್ಟೆ, ಕಟಪಾಡಿ, ಪಡೀಲ್ ಮತ್ತು ಮುಡಿಪು ಅಥವಾ ವಾಮಂಜೂರಿನಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯಲು ಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ರಾಷ್ಟçದಾದ್ಯಂತ ಬ್ಯಾಂಕ್ ಬೆಳೆಯಲು ಅನುವು ಮಾಡಿಕೊಡಲು ಗ್ರಾಹಕರ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿದರು. ಸಮಾರಂಭದಲ್ಲಿ ಹಾಜರಿದ್ದ ಎಲ್ಲಾ ಗಣ್ಯರು, ಗ್ರಾಹಕರು ಮತ್ತು ಹಿತೈಷಿಗಳನ್ನು ಅವರು ಸ್ವಾಗತಿಸಿದರು.

    ತಮ್ಮ ಭಾಷಣದಲ್ಲಿ, ಶ್ರೀ ಮೈಕೆಲ್ ಡಿಸೋಜಾ ಅವರು ಬ್ಯಾಂಕಿನ ಪ್ರಗತಿಗೆ ಕಾರಣಕರ್ತರಾದ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಬ್ಯಾಂಕ್ ಸಾಧಿಸಿರುವ ಅಮೋಘ ಸುಧಾರಣೆ ಮತ್ತು ಬೆಳವಣಿಗೆಯನ್ನು ವಿವರಿಸಿ ಶಾಖೆಗಳ ಅಭಿವೃದ್ಧಿ, ಸಿಬ್ಬಂದಿ ಅಭಿವೃದ್ಧಿ, ಗ್ರಾಹಕ ಸಂಬoಧಗಳು, ಪ್ರಚಾರ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡAತೆ ಎಲ್ಲಾ ಕ್ಷೇತ್ರಗಳಲ್ಲಿ ಬ್ಯಾಂಕ್ ಸ್ಥಿರ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕಾಗಿ ಗಣ್ಯರು ಮತ್ತು ಗ್ರಾಹಕರನ್ನು ಒಟ್ಟುಗೂಡಿಸುವ ಅಧ್ಯಕ್ಷರ ಸಾಮರ್ಥ್ಯವನ್ನು ಅವರು ಶ್ಲಾಘಿಸಿದರು. “ನಾವು ಸೇವೆ ಮಾಡಲು ಬೆಳೆಯುತ್ತೇವೆ, ಬೆಳೆಯಲು ಸೇವೆ ಮಾಡುತ್ತೇವೆ” ಎಂಬ ಪದಗಳನ್ನು ಅವರು ಉಲ್ಲೇಖಿಸಿ ಗ್ರಾಹಕರ ನಿರಂತರ ಬೆಂಬಲದೊoದಿಗೆ ನಿರ್ದೇಶಕರು ಮತ್ತು ಸಿಬ್ಬಂದಿಯ ಸಂಯೋಜಿತ ಪ್ರಯತ್ನಗಳ ಮೂಲಕ ಉತ್ತಮ ಸಾಲ ನೀಡುವಿಕೆ ಮತ್ತು ಸಕಾಲಿಕ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳಲು ಸಲಹೆ ನೀಡಿದರು.

    ಫಾದರ್ ಜೆ. ಬಿ. ಕ್ರಾಸ್ತಾ ಅವರು ತಮ್ಮ ಭಾಷಣದಲ್ಲಿ, ಗ್ರಾಹಕರಿಗೆ ಬ್ಯಾಂಕ್ ನೀಡುವ ಅನುಕರಣೀಯ ಸೇವೆ ಮತ್ತು ಸುರಕ್ಷತೆಗಾಗಿ ಸಂತೋಷ ವ್ಯಕ್ತಪಡಿಸಿದರು. ಶಾಖೆಯ ಸಿಬ್ಬಂದಿಗಳ ಸಮರ್ಪಣೆ ಮತ್ತು ಬದ್ಧತೆಯನ್ನು ಹಾಗೂ ಶಾಖೆಯ ವ್ಯವಹಾರವನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಆಸಕ್ತಿಯನ್ನು ಶ್ಲಾಘಿಸಿದರು. ಬ್ಯಾಂಕಿನ ಪ್ರಗತಿ ಮತ್ತು ಅಭಿವೃದ್ಧಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

    ಶ್ರೀ ಲಿಯೋ ರೊಡ್ರಿಗಸ್ ಅವರು ಬ್ಯಾಂಕಿನ ಬೆಳವಣಿಗೆಗೆ ಅಧ್ಯಕ್ಷರನ್ನು ಅಭಿನಂದಿಸಿ, ಗಣ್ಯರು, ಸಿಬ್ಬಂದಿ ಮತ್ತು ಗ್ರಾಹಕರ ಉಪಸ್ಥಿತಿಗೆ ಧನ್ಯವಾದಗಳನ್ನು ಅರ್ಪಿಸಿದರು.

    ಫಾದರ್ ಫೌಸ್ಟಿನ್ ಲೋಬೊ ತಮ್ಮ ಭಾಷಣದಲ್ಲಿ, ಒಬ್ಬ ವ್ಯಕ್ತಿಯು ಸಲ್ಲಿಸಿದ ಸೇವೆಯಿಂದ ಗುರುತಿಸಲ್ಪಡುತ್ತಾನೆ ಎಂಬ ಬೈಬಲ್‌ನ ವಚನವನ್ನು ಉಲ್ಲೇಖಿಸಿದರು. ನಾವು ಬದುಕಬೇಕು ಮತ್ತು ಇತರರನ್ನು ಬದುಕಲು ಬಿಡಬೇಕು ಎಂದು ಹೇಳಿ, ಇದು ಬ್ಯಾಂಕಿಗೆ ಸಮಾನವಾಗಿ ಅನ್ವಯಿಸುತ್ತದೆ, ಬ್ಯಾಂಕಿನಿAದ ಸೇವೆ ಸಲ್ಲಿಸುವ ಗ್ರಾಹಕರ ಬೆಳವಣಿಗೆಯೊಂದಿಗೆ ಅದು ಬೆಳೆಯಬೇಕು. ಬದಲಾವಣೆ ಅನಿವಾರ್ಯ ಮತ್ತು ಎಲ್ಲಾ ಜೀವಿಗಳಿಗೆ ನಿರಂತರ ಪ್ರಕ್ರಿಯೆ ಎಂದು ಅವರು ಹೇಳಿದರು. ಸಮಾಜಕ್ಕೆ ಸೇವೆ ಸಲ್ಲಿಸಲು ಬ್ಯಾಂಕ್ ತನ್ನ ಸೌಲಭ್ಯಗಳು ಮತ್ತು ಸೇವೆಗಳನ್ನು ಸುಧಾರಿಸುವ ಮೂಲಕ ಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಬೇಕು ಎಂದು ಹೇಳಿ ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು.
    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ದಿ ವೈಟ್ ಡವ್ಸ್ ಸೈಕಿಯಾಟ್ರಿಕ್ ನರ್ಸಿಂಗ್ & ಡೆಸ್ಟಿಟ್ಯೂಟ್ ಹೋಂನ ಸಂಸ್ಥಾಪಕಿ ಶ್ರೀಮತಿ ಕೊರಿನ್ ರಸ್ಕಿನ್ಹಾ ಅವರನ್ನು ಶಾಲು, ಹಣ್ಣು ಹಂಪಲು, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ಹೂವಿನ ಪುಷ್ಪ್ಪಗುಚ್ಛದೊಂದಿಗೆ ಸನ್ಮಾನಿಸಲಾಯಿತು.

    ಶ್ರೀ ಮೈಕೆಲ್ ಡಿಸೋಜಾ ಅವರನ್ನು ET Now ಬಿಸಿನೆಸ್ ಕಾನ್ಕ್ಲೇವ್ & ಅವಾರ್ಡ್ಸ್ 2025 – ಮಂಗಳೂರು ಆವೃತ್ತಿಯಲ್ಲಿ ರೂಪಾಂತರಗೊAಡ ಲೋಕೋಪಕಾರಿ ಮತ್ತು ಸಮುದಾಯ ನಾಯಕತ್ವ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ ಗೌರವಿಸಲಾಯಿತು.

    ಡಿಸೆಂಬರ್ 11 ರಂದು ಚಂಡೀಗಢದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಪಂದ್ಯದಲ್ಲಿ ಎಸ್‌ಬಿಐ ಲೈಫ್ ಪರವಾಗಿ ಕ್ರಿಕೆಟ್ ತಾರೆಯೊಬ್ಬರಿಗೆ ಪಂದ್ಯ ಶೇಷ್ಟ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆಯಾಗಿದ್ದಕ್ಕಾಗಿ ಶ್ರೀ ಐವಾನ್ ಫ್ರಾಂಕ್ ಅವರನ್ನು ಗೌರವಿಸಲಾಯಿತು.
    ಇತ್ತೀಚೆಗೆ ಬಿಡುಗಡೆಯಾದ ಕೊಂಕಣಿ ಚಲನಚಿತ್ರ ‘ಬಾಪಾಚೆ ಪುತಾಚೆ ನಾವಿ’ ದಲ್ಲಿ ನಟಿಸಿರುವ ಶ್ರೀ ಮೆಲ್ವಿನ್ ಡಿಅಲ್ಮೇಡಾ ಅವರನ್ನು ಸಹ ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಭಾಗವಾಗಿ, ಎಂಸಿಸಿ ಬ್ಯಾಂಕ್ ದಸೆಂಬರ್ ತಿಂಗಳಲ್ಲಿ ವಿಶೇಷ ಹುಟ್ಟು ಹಬ್ಬ ಆಚರಿಸಿದ ಗ್ರಾಹಕರಾದ ಶ್ರೀ ಎಡ್ಮಂಡ್ ಫ್ರಾಂಕ್ – 75 ನೇ ಹುಟ್ಟುಹಬ್ಬ (ಡಿಸೆಂಬರ್ 1), ಶ್ರೀ ಜಾನ್ ಸೈಮನ್ ಡಿ’ಸೋಜಾ – 60 ನೇ ಹುಟ್ಟುಹಬ್ಬ (ಡಿಸೆಂಬರ್ 3), ಶ್ರೀಮತಿ ಮೆರ್ಲಿನ್ ರೇಗೊ – 60 ನೇ ಹುಟ್ಟುಹಬ್ಬ (ಡಿಸೆಂಬರ್ 7), ಶ್ರೀಮತಿ ಶಾಲೆಟ್ ಡಿ’ಸೋಜಾ – 50 ನೇ ಹುಟ್ಟುಹಬ್ಬ (ಡಿಸೆಂಬರ್ 20), ಶ್ರೀ ವಿ. ಸುರೇಶ್ ಕುಮಾರ್ – 50 ನೇ ಹುಟ್ಟುಹಬ್ಬ (ಡಿಸೆಂಬರ್ 21) ಇವರನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮವನ್ನು ಶ್ರೀ ರೋಶನ್ ಕ್ರಾಸ್ತಾ ನಿರೂಪಿಸಿ ವಂದಿಸಿದರು.

    ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ಕಂಕನಾಡಿ ಶಾಖಾ ನಿರ್ದೇಶಕರಾದ ಶ್ರೀ ಹೆರಾಲ್ಡ್ ಮೊಂತೇರೊ, ನಿರ್ದೆಶಕರಾದ ಶ್ರೀ ಮೆಲ್ವಿನ್ ವಾಸ್, ಶ್ರೀ ಸಿ.ಜಿ.ಪಿಂಟೊ, ಶ್ರೀ ಜೆ.ಪಿ.ರೊಡ್ರಿಗಸ್, ಶ್ರೀಮತಿ ಐರೀನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ಶ್ರೀ ರೋಶನ್ ಡಿಸೋಜ, ಶ್ರೀ ಫೆಲಿಕ್ಸ್ ಡಿಕ್ರೂಜ್, ಶ್ರೀ ಆಲ್ವಿನ್ ಮೊಂತೇರೊ, ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಐಡಾ ಪಿಂಟೊ, ಸಿಬ್ಬಂದಿ ಸದಸ್ಯರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

    Post Views: 129

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.