Facebook Twitter Instagram
    Saturday, September 19
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕುಂದಾಪುರ: ನೇರಳಕಟ್ಟೆಯಲ್ಲಿ ಎರಡು ವಾಮನ ಮುದ್ರೆ ಕಲ್ಲು ಪತ್ತೆ
    ಇತ್ತೀಚಿನ ಸುದ್ದಿ

    ಕುಂದಾಪುರ: ನೇರಳಕಟ್ಟೆಯಲ್ಲಿ ಎರಡು ವಾಮನ ಮುದ್ರೆ ಕಲ್ಲು ಪತ್ತೆ

    August 28, 2022
    Share

    ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಪಂ ವ್ಯಾಪ್ತಿಯ ನೇರಳಕಟ್ಟೆ ಅರಳಿಕಟ್ಟೆಯ ಬಾವಿಕಟ್ಟೆಯ ಬಳಿ ಹಾಗೂ ನೇರಳಕಟ್ಟೆಯ ಜಾಡ್ಕಟ್ಟು ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಮಿಪ ವಾಮನ ಮುದ್ರಿಕೆಯ ಕಲ್ಲುಗಳು ಪತ್ತೆಯಾಗಿವೆ.

    ಶೈವರು, ವೈಷ್ಣವರು, ಜೈನರ ಆರಾಧನೆಗೆ ಸಂಬಂಧಿಸಿದ ಹಾಗೂ ಅವರ ಆರಾಧನೆಗೆ ಗಡಿಗಳನ್ನು ಗುರುತಿಸುವುದು ಸಹಜ. ಶೈವರ ಗಡಿಗಳಿಗೆ ಲಿಂಗ ಮುದ್ರಿಕೆ ಕಲ್ಲು ಅಥವಾ ಶೈವ ಮುದ್ರಿಕೆ ಕಲ್ಲು, ವೈಷ್ಣವರ ಗಡಿಗಳಿಗೆ ವಾಮನ ಮುದ್ರಿಕೆ ಕಲ್ಲು, ಜೈನರ ಗಡಿಗಳಿಗೆ ಮುಕ್ಕೋಡೆ ಕಲ್ಲುಗಳನ್ನು ಹಾಕುತ್ತಿದ್ದರು. ಈ ಮೂಲಕ ಬಹಳ ಸ್ಪಷ್ಟವಾಗಿ ಅವರವರ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು ಎನ್ನಲಾಗಿದೆ.

    ನೇರಳಕಟ್ಟೆಯ ಎರಡು ವಾಮನ ಮುದ್ರಿಕೆಯ ಕಲ್ಲುಗಳಲ್ಲಿ ಸೂರ್ಯ ಚಂದ್ರ ಇರುವ ತನಕ ಅಜರಾಮರವಾಗಿರಲಿ ಎಂದು ಸಂದೇಶ ಸಾರುವಂತಹ ಸೂರ್ಯ ಹಾಗೂ ಚಂದ್ರ ಶಿಲ್ಪಕಲೆಯೊಂದಿಗೆ ವ್ಯಕ್ತಿ ಅಂದರೆ ವಾಮನ ಅವರ ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಕಮಂಡಲವಿದ್ದು ಇದು ವಾಮನ ಶಿಲ್ಪಕಲೆಯಲ್ಲಿ ಸಹಜವಾಗಿ ಕಂಡುಬರುತ್ತದೆ.

    ಅಂತೆಯೇ ವಾಮನ ಮುದ್ರಿಕೆಯ ಕಲ್ಲಿನ ಅಣತಿ ದೂರದಲ್ಲಿ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನವಿದೆ. ಈ ವಾಮನ ಮುದ್ರಿಕೆ ಕಲ್ಲು ಶ್ರೀಲಕ್ಷ್ಮೀ ವೆಂಕಟರಮಣ ದೇಗುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಿದೆ. ಈ ಹಿಂದೆ ನೇರಳಕಟ್ಟೆಯ ಬಾವಿಕಟ್ಟೆ ಬಳಿ, ಕಂದಾವರದ ಶ್ರೀವೀರಾಂಜನೇಯ ದೇವಾಲಯದ ಬಳಿ, ನಂದ್ರೋಳಿ ಶ್ರೀಲಕ್ಷ್ಮೀನಾರಾಯಣ ದೇವಾಲಯದ ಬಳಿ ವಾಮನ ಮುದ್ರಿಕೆ ಕಲ್ಲು ಕಂಡು ಬಂದಿತ್ತು.ಈ ವಾಮನ ಮುದ್ರಿಕೆ ಕಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬನ್ನೂರು ಹಾಗೂ ಸಂತೋಷ್ ನೇರಳಕಟ್ಟೆ ಇವರು ಪತ್ತೆ ಹಚ್ಚಿದ್ದು ಇವರಿಗೆ ಕರ್ಕುಂಜೆ ಗ್ರಾಪಂಉಪಾಧ್ಯಕ್ಷ ಸಂತೋಷ್ ಪೂಜಾರಿ, ಸುಕುಮಾರ್ ನೇರಳಕಟ್ಟೆ, ಜಯರಾಮ ನೇರಳಕಟ್ಟೆ, ಗಿರಿ ಪೂಜಾರಿ ನೇರಳಕಟ್ಟೆ ಸಹಕರಿಸಿದ್ದರು.

    Post Views: 221

    Related Posts

    ಮಸೀದಿ ಎದುರು ಇನ್ಸ್‌ಪೆಕ್ಟರ್‌ ಧನಂಜಯಗೆ ಏಕವಚನದಲ್ಲೇ ತರಾಟೆ ತಗೆದುಕೊಂಡ ಪ್ರತಾಪ್ ಸಿಂಹ

    September 19, 2026

    ಕೃಷಿ ಹೊಂಡದಲ್ಲಿ ದಂಪತಿಗಳ ಶವವಾಗಿ ಪತ್ತೆ..!!

    September 19, 2026

    ಮಂಗಳೂರು ಬಂದರಿಗೆ ಬೆಳ್ಳಂಬೆಳಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಭೇಟಿ

    September 19, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಸೀದಿ ಎದುರು ಇನ್ಸ್‌ಪೆಕ್ಟರ್‌ ಧನಂಜಯಗೆ ಏಕವಚನದಲ್ಲೇ ತರಾಟೆ ತಗೆದುಕೊಂಡ ಪ್ರತಾಪ್ ಸಿಂಹ

    September 19, 2026

    ಕೃಷಿ ಹೊಂಡದಲ್ಲಿ ದಂಪತಿಗಳ ಶವವಾಗಿ ಪತ್ತೆ..!!

    September 19, 2026

    ಮಂಗಳೂರು ಬಂದರಿಗೆ ಬೆಳ್ಳಂಬೆಳಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಭೇಟಿ

    September 19, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.