Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಹೊಸ ವರ್ಷದಲ್ಲಿ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಬದಲಾವಣೆ-48 ಮಂದಿ ಐಪಿಎಸ್‌ ಅಧಿಕಾರಿಗಳಿಗೆ ಮುಂಭಡ್ತಿ-ವಿವಿಧ ಜಿಲ್ಲೆಯ ಎಸ್ಪಿಗಳ ವರ್ಗಾವಣೆ
    ಇತ್ತೀಚಿನ ಸುದ್ದಿ

    ಹೊಸ ವರ್ಷದಲ್ಲಿ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಬದಲಾವಣೆ-48 ಮಂದಿ ಐಪಿಎಸ್‌ ಅಧಿಕಾರಿಗಳಿಗೆ ಮುಂಭಡ್ತಿ-ವಿವಿಧ ಜಿಲ್ಲೆಯ ಎಸ್ಪಿಗಳ ವರ್ಗಾವಣೆ

    January 1, 2026
    Share

    ಬೆಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ರಾಜ್ಯದ 48 ಮಂದಿ ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು(ಎಸ್ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಲಾಗಿದೆ.

    ಈ ಪ್ರಮುಖ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಮಂಡ್ಯ ಶಿವಮೊಗ್ಗ ಕೊಡಗು, ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ.

    ದಕ್ಷಿಣ ವಲಯ (ಮೈಸೂರು ) ಐಜಿಪಿಯಾಗಿ ಡಾ.ಎಂ.ಬಿ.ಬೋರಲಿಂಗಯ್ಯ ಬೆಂಗಳೂರು ಅಪರಾಧ ವಿಭಾಗದ ಐಜಿಪಿ ಮತ್ತು ಅಪರ ಆಯುಕ್ತರಾಗಿ ಅಜಯ್ ಹಿಲೋರಿ, ಸಿಐಡಿಯ(ಆರ್ಥಿಕ ಅಪರಾಧಗಳು) ಡಿಐಜಿಯಾಗಿ ಡಾ.ಭೀಮಾಶಂಕರ್ ಗುಳೇದ್, ಕರ್ನಾಟಕ ಲೋಕಾಯುಕ್ತದ ಡಿಐಜಿಯಾಗಿ ಡಿ.ಆ‌ರ್.ಸಿರಿಗೌರಿ ಅವರಿಗೆ ಮುಂಭಡ್ತಿ ನೀಡಲಾಗಿದೆ. ಬಿಎಂಟಿಸಿ(ಭದ್ರತೆ ಮತ್ತು ಜಾಗೃತ) ನಿರ್ದೇಶಕ ಮಂಗಳೂರು ಮೂಲದ ಅಬ್ದುಲ್ ಅಹದ್ ಅವರನ್ನು ಡಿಐಜಿಯಾಗಿ ಭಡ್ತಿ ನೀಡಿ ಸದರಿ ಹುದ್ದೆಯನ್ನು ಮೇಲ್ದರ್ಜೇಗೇರಿಸಲಾಗಿದೆ.

    ಡಿಐಜಿಪಿ ಹುದ್ದೆಗೆ ಮುಂಭಡ್ತಿಯಾದ ಅಧಿಕಾರಿಗಳು:

    ಸಿಐಡಿ(ಆರ್ಥಿಕ ಅಪರಾಧ) ಡಿಐಜಿಪಿಯಾಗಿ ಭೀಮಾಶಂಕರ್ ಗುಳೇದ್, ವೈರ್‌ಲೆಸ್ ಡಿಐಜಿಪಿಯಾಗಿ ಇಲಕ್ಕಿಯ ಕರುಣಾಗರನ್, ರಾಜ್ಯ ಗುಪ್ತಚರ ಡಿಐಜಿಪಿಯಾಗಿ ವೇದಮೂರ್ತಿ, ಐಎಸ್‌ಡಿ ಡಿಐಜಿಪಿಯಾಗಿ ಕೆ.ಎಂ.ಶಾಂತರಾಜು, ಎಸ್‌ಎಚ್‌ಆರ್‌ಸಿ ಡಿಐಜಿಪಿಯಾಗಿ ಹನುಮಂತರಾಯ, ಬಿಎಂಟಿಸಿ ನಿರ್ದೇಶಕ(ದರ್ಜೆ ಏರಿಕೆ) ಅಬ್ದುಲ್ ಅಹದ್, ಪೊಲೀಸ್ ತರಬೇತಿ ವಿಭಾಗದ ಡಿಐಜಿಪಿಯಾಗಿ ಡಿ.ದೇವರಾಜು, ಕರ್ನಾಟಕ ಲೋಕಾಯುಕ್ತ ಡಿಐಜಿಪಿಯಾಗಿ ಡಾ.ಸಿರಿಗೌರಿ, ಗುಪ್ತಚರ ಡಿಐಜಿಪಿಯಾಗಿ ಡಾ.ಕೆ.ಧರಣಿದೇವಿ, ಗೃಹರಕ್ಷಕ ದಳ ಡಿಐಜಿಪಿಯಾಗಿ ಎಸ್.ಸವಿತಾ, ಕೆಎಸ್‌ಆರ್‌ಪಿ ಡಿಐಜಿಪಿ ಸಿ.ಕೆ.ಬಾಬಾ ಅವರಿಗೆ ಮುಂಭಡ್ತಿ ನೀಡಲಾಗಿದೆ.

    ಆ್ಯಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್(ಎಎನ್‌ಟಿಎಫ್‌)ನ ಡಿಐಜಿಪಿಯಾಗಿ ಎಸ್.ಗಿರೀಶ್, ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲಯಾಗಿ ಡಿಐಜಿಪಿ ಎಂ.ಪುಟ್ಟಮಾದಯ್ಯ ಬೆಂಗಳೂರು ಪೊಲೀಸ್ ಮುಖ್ಯ ಕಚೇರಿಯ ಡಿಐಜಿಪಿಯಾಗಿ ಟಿ.ಶ್ರೀಧರ್‌, ವಿಶೇಷ ಕ್ರಿಯಾ ಪಡೆಯ(ಎಸ್‌ಎಎಫ್) ಡಿಐಜಿಪಿಯಾಗಿ ಎ.ಎನ್.ಪ್ರಕಾಶ್‌ಗೌಡ, ಕಾರಾಗೃಹ ಡಿಐಜಿಪಿಯಾಗಿ ಜಿನೇಂದ್ರ ಖನಗಾವಿ, ರೈಲ್ವೆ ಡಿಐಜಿಪಿಯಾಗಿ ಜೆ.ಕೆ.ರಶ್ಮಿ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದ(ಎಸ್‌ಸಿಆರ್‌ಬಿ) ಡಿಐಜಿಪಿ ಟಿ.ಪಿ.ಶಿವಕುಮಾ‌ರ್, ಕರ್ನಾಟಕ ಪೊಲೀಸ್ ಅಕಾಡಮಿಯ ನಿರ್ದೇಶಕರಾಗಿ ವಿಷ್ಣುವರ್ಧನ್, ಬೆಂಗಳೂರು ಜನರಲ್‌(ಅಪ್‌ಗ್ರೇಡ್) ಮುಖ್ಯ ಕಚೇರಿಯ ಡಿಐಜಿಪಿಯಾಗೊ ಡಾ.ಸಂಜೀವ್ ಎಂ. ಪಾಟೀಲ್, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ(ಸಿಟಿಆರ್‌ಎಸ್) ಡಿಐಜಿಪಿಯಾಗಿ ಕೆ.ಪರಶುರಾಮ, ಸೈಬರ್ ಕಮಾಂಡ್ ಡಿಐಜಿಪಿಯಾಗಿ ಎಚ್.ಡಿ.ಆನಂದ್ ಕುಮಾ‌ರ್, ಅಪರಾಧ(ಅಪ್‌ಗ್ರೇಡ್) ವಿಭಾಗದ ಡಿಐಜಿಪಿಯಾಗಿ ಕಲಾ ಕೃಷ್ಣಸ್ವಾಮಿ ಅವರಿಗೆ ಮುಂಭಡ್ತಿ ನೀಡಲಾಗಿದೆ.

    ಐಜಿಪಿ ಆಗಿ ಮುಂಭಡ್ತಿ ಹೊಂದಿದ ಅಧಿಕಾರಿಗಳು

    ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ಮೈಸೂರು ದಕ್ಷಿಣ ವಲಯದಲ್ಲಿ ಐಜಿಪಿ ನೀಡಿ ಮುಂಭಡ್ತಿ ಮುಂದುವರಿಸಲಾಗಿದೆ. ಬೆಂಗಳೂರು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಅವರನ್ನು ಐಜಿಪಿಯಾಗಿ ಮುಂಭಡ್ತಿ ನೀಡಿ ಮುಂದುವರಿಸಲಾಗಿದೆ.

    ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

    ಮಂಡ್ಯ ಎಸ್ಪಿಯಾಗಿ ಡಾ.ವಿ.ಜೆ.ಶೋಭಾರಾಣಿ, ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮಾ, ಹಾಸನ ಎಸ್ಪಿಯಾಗಿ ಶುಭನ್ವಿತಾ, ಕೋಲಾರ ಎಸ್ಪಿಯಾಗಿ ಕನ್ನಿಕಾ ಸಿಕ್ರಿವಾಲ್, ಕೊಡಗು ಎಸ್ಪಿಯಾಗಿ ಆರ್.ಎನ್.ಬಿಂದುಮಣಿ, ಬಳ್ಳಾರಿ ಎಸ್ಪಿಯಾಗಿ ಪವನ್ ನೆಟ್ಟೂರು, ಚಾಮರಾಜನಗರದ ಎಸ್ಪಿಯಾಗಿ ಎಂ.ಮುತ್ತುರಾಜು, ರಾಯಚೂರು ಎಸ್ಪಿಯಾಗಿ ಅರುಣಾಂಶು ಗಿರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿಯಾಗಿ ಎಂ.ವಿ.ಚಂದ್ರಕಾಂತ್, ಶಿವಮೊಗ್ಗ ಎಸ್ಪಿಯಾಗಿ ಬಿ.ನಿಖಿಲ್, ಮೈಸೂರು ಎಸ್ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ, ಬೆಳಗಾವಿ ಎಸ್ಪಿಯಾಗಿ ಕೆ.ರಾಮಾನುಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿಯಾಗಿ ಸೈದುಲು ಅಡಾವತ್, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಯತೀಶ್.ಎನ್, ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ಮಿಥುನ್ ಕುಮಾರ್, ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವಿಕ್ರಮ್ ಆಮೈ, ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿಯಾಗಿ ಮೊಹಮ್ಮದ್ ಸುಜೀತಾ.ಎಂ.ಎಸ್., ರೈಲ್ವೆ ಎಸ್ಪಿಯಾಗಿ ಸಾರಾ ಫಾತಿಮಾ, ಸಿಐಡಿ ಡಿಸಿಪಿಯಾಗಿ ಡಾ.ಕವಿತಾ.ಬಿ.ಟಿ, ಸಿಐಡಿ ಎಸ್ಪಿಯಾಗಿ ಸಜೀತ್‌, ಸಿಐಡಿ ಎಸ್ಪಿಯಾಗಿ ಸ್ಯಾಮ್ ವರ್ಗೀಸ್, ಸಿಐಡಿ ಎಸ್ಪಿಯಾಗಿ ಶಾಲೂ, ಸಿಐಡಿ ಎಸ್ಪಿಯಾಗಿ ಡಾ.ಹರ್ಷ ಪ್ರಿಯತ್ವದ ಅವರನ್ನು ವರ್ಗಾವಣೆಗೊಳಿಸಲಾಗಿದೆ.

    Post Views: 318

    Related Posts

    ಹುಲಿಕಲ್ ಘಾಟ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 17 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

    June 7, 2026

    ಆನ್‌ಲೈನ್ ಗೇಮ್ ವ್ಯಸನದ ಭೀಕರ ಅಂತ್ಯ: ತಂದೆ-ಅಕ್ಕನನ್ನೇ ಚಾಕುವಿನಿಂದ ಕೊಂದ ಪುತ್ರ

    June 7, 2026

    ಸಾಕು ಪ್ರಾಣಿಯೇ ಜೀವದಾತ! ಬೆಕ್ಕಿನ ಕಾರಣದಿಂದ ಭೀಕರ ದುರಂತದಿಂದ ಪಾರಾದ ಕುಟುಂಬ

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.