ಬೆಳ್ತಂಗಡಿ: ಕುತ್ತೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಕ್ಸಲ್ ಸಂಬಂಧಿತ ಕರಪತ್ರ ಹಂಚಿಕೆ ಹಾಗೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಜಾನ್ ಅಲಿಯಾಸ್ ಜಯಣ್ಣ ರಾಯಚೂರು ಅವರು ಫೆಬ್ರವರಿ 19ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಬಾಡಿ ವಾರಂಟ್ ಮೂಲಕ ಕೇರಳ ಪೊಲೀಸರು ಜಯಣ್ಣರನ್ನು ಕೋರ್ಟ್‌ಗೆ ಹಾಜರುಪಡಿಸಿದರು.ಜಯಣ್ಣ ಪರ ವಕೀಲ ಶಿವಕುಮಾರ್ ಹಾಗೂ ಸರ್ಕಾರದ ಪರ ವಕೀಲ ದಿವ್ಯರಾಜ್ ಹೆಗ್ಡೆ ನ್ಯಾಯಾಲಯಕ್ಕೆ ಹಾಜರಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.10ಕ್ಕೆ ವಿಚಾರಣೆ ಮುಂದೂಡಲಾಗಿದೆ




