ಉಡುಪಿ : ಕಾಪು ಕಡಲ ಕಿನಾರೆಯಲ್ಲಿ ಅಕ್ರಮ ಪಚ್ಚಿಲೆ (ಅಜಿರ್ ) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರಿದ್ದ ದೋಣಿ ಗುದ್ದಿದ ಪರಿಣಾಮ ಸ್ಥಳೀಯ ಮೀನುಗಾರರ ದೋಣಿ ಮಗುಚಿ ಇಬ್ಬರು ಮೀನುಗಾರರು ನೀರಿಗೆ ಬಿದ್ದಿದ್ದು, ಒಬ್ಬನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೀನುಗಾರ ನಾಪತ್ತೆಯಾದ ಘಟನೆ ನಡೆದಿದೆ.
ಏನಿದು ಘಟನೆ? ಕಳೆದ ಕೆಲವು ದಿನಗಳಿಂದ ತಮಿಳುನಾಡು ಮೂಲದ ಮೀನುಗಾರರು ಅಕ್ರಮ ಪಚ್ಚಿಲೆ ಮೀನುಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಸಣ್ಣ ದೋಣಿಯಲ್ಲಿ ತೆರಳಿ ತಮಿಳುನಾಡು ಮೂಲದ ಮೀನುಗಾರರ ಜೊತೆ ಮೀನುಗಾರಿಕೆ ಮಾಡದಂತೆ ಮನವಿ ಮಾಡಲು ಮುಂದಾಗಿದ್ದರು. ಈ ವೇಳೆ ತಮಿಳುನಾಡಿನ ದೊಡ್ಡ ದೋಣಿಯನ್ನು ಸ್ಥಳೀಯ ಮೀನುಗಾರರ ಸಣ್ಣ ದೋಣಿಗೆ ಉದ್ದೇಶಪೂರ್ವಕವಾಗಿ ಡಿ*ಕ್ಕಿ ಹೊಡೆಸಿದ್ದಾರೆ. ಈ ವೇಳೆ ಕಾಪು ಮೂಲದ ದೋಣಿ ಮಗುಚಿ ಬಿ*ದ್ದು ಇಬ್ಬರು ಮೀನುಗರಾರು ನೀರಿಗೆ ಬಿ(ದ್ದಿದ್ದು ಒಬ್ಬನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೀನುಗಾರ ನಾಪತ್ತೆಯಾಗಿದ್ದಾನೆ.
ಘಟನೆ ಬಳಿಕ ತಮಿಳುನಾಡು ಮೂಲದ ಮೀನುಗಾರರು ಮಲ್ಪೆಯತ್ತ ಪಲಾಯನ ಮಾಡಿದ್ದಾಗಿ ಸ್ಥಳೀಯರು ದೂರಿದ್ದಾರೆ.




