Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶಿಕ್ಷಕರೊಂದಿಗೆ ಈಜಲು ಹೋಗಿದ್ದ ವಿಟ್ಲ ಮೂಲದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು
    ಇತ್ತೀಚಿನ ಸುದ್ದಿ

    ಶಿಕ್ಷಕರೊಂದಿಗೆ ಈಜಲು ಹೋಗಿದ್ದ ವಿಟ್ಲ ಮೂಲದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

    April 13, 2026
    Share

    ಶಿಕ್ಷಕರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಅನಿಕೇತ್ (14) ಎಂದು ಗುರುತಿಸಲಾಗಿದೆ. ಆತ ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೃತ ವಿದ್ಯಾರ್ಥಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದವನಾಗಿದ್ದಾನೆ.

    ಭಾನುವಾರ ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈಜಾಡುತ್ತಿದ್ದಾಗ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

    ಮೃತ ಅನಿಕೇತ್ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರನಾಗಿದ್ದಾನೆ. ಗೋವರ್ಧನ್ ನಾಯಕ್ ಅವರು ಜೀವವಿಮಾ ಪ್ರತಿನಿಧಿಯಾಗಿದ್ದು, ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಜೀವವಿಮಾ ನಿಗಮದ ಕಚೇರಿಯನ್ನು ಹೊಂದಿದ್ದಾರೆ. ಅವರು ವಿವಿಧ ಧಾರ್ಮಿಕ ಹಾಗೂ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಜಯಪುರದಿಂದ ವಿಟ್ಲಕ್ಕೆ ತರಲಾಗುತ್ತಿದೆ. ಸೋಮವಾರ ಬೆಳಗ್ಗೆ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.ಈ ಘಟನೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    Post Views: 114

    Related Posts

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.