Facebook Twitter Instagram
    Thursday, April 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ
    ಇತ್ತೀಚಿನ ಸುದ್ದಿ

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026
    Share

    ಬೆಂಗಳೂರು: ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಉದ್ಯಮಿಯೊಬ್ಬರಿಂದ 1.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಇನ್‌ಸ್ಟಾಗ್ರಾಮ್ ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸೆಲೆಬ್ರಿಟಿ ಮೇಕಪ್ ಕ್ಲಿನಿಕ್ ಮತ್ತು ಆಸ್ಪತ್ರೆಗಳ ಮಾಲೀಕ ಕಾರ್ತಿಕ್ ಪುತಾ (32) ಎಂಬುವವರು ಈ ದೂರು ನೀಡಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ವ್ಯವಹಾರ ಹೊಂದಿರುವ ಕಾರ್ತಿಕ್‌ ಅವರಿಗೆ ತಮ್ಮ ಕ್ಲಿನಿಕ್ ಪ್ರಮೋಷನ್ ಸಲುವಾಗಿ 2024ರಲ್ಲಿ ಸಾಧನಾ ಶೆಟ್ಟಿ ಪರಿಚಯವಾಗಿದ್ದರು. ಈ ಪರಿಚಯ ಆತ್ಮೀಯತೆಗೆ ತಿರುಗಿ ಹಲವು ಬಾರಿ ಭೇಟಿಯಾಗಿದ್ದರು.

    ದೂರಿನ ಪ್ರಕಾರ, ಜೊತೆಗಿದ್ದ ಸಮಯದ ಖಾಸಗಿ ಫೋಟೋಗಳು, ವಿಡಿಯೋಗಳು ಮತ್ತು ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಸಾಧನಾ ಶೆಟ್ಟಿ, ಅವುಗಳನ್ನು ಕಾರ್ತಿಕ್ ಅವರ ಪತ್ನಿ ಮತ್ತು ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾರಂಭಿಸಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಬಾರದೆಂದರೆ 1.5 ಕೋಟಿ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
    ಮರ್ಯಾದೆಗೆ ಹೆದರಿದ ಕಾರ್ತಿಕ್ ಅವರು ಹಂತ ಹಂತವಾಗಿ ಸಾಧನಾ ಅವರಿಗೆ ಹಣ ಮತ್ತು ಉಡುಗೊರೆಗಳನ್ನು ನೀಡಿದ್ದರು: ಸಾಧನಾ ಶೆಟ್ಟಿ ಬ್ಯಾಂಕ್ ಖಾತೆಗೆ 5 ಲಕ್ಷ ರೂ. ಮತ್ತು ನಗದು ರೂಪದಲ್ಲಿ 5 ಲಕ್ಷ ರೂ. ವರ್ಗಾವಣೆ. ಒಂದು ಚಿನ್ನದ ಸರ ಮತ್ತು ಒಂದು ಚಿನ್ನದ ಉಂಗುರ. 1.5 ಲಕ್ಷ ರೂ. ಮೌಲ್ಯದ ಐಫೋನ್. ಕೂಡ ಕೊಟ್ಟಿದ್ದಾರೆ.

    ಇಷ್ಟೆಲ್ಲಾ ನೀಡಿದರೂ ಸಾಧನಾ ಶೆಟ್ಟಿ ಅವರ ಬೇಡಿಕೆ ಮುಂದುವರಿದಿತ್ತು. ಹಣ ನೀಡಲು ನಿರಾಕರಿಸಿದಾಗ, ಸಾಧನಾ ಅವರು ಕೆಲವು ಖಾಸಗಿ ವಿಡಿಯೋ ತುಣುಕುಗಳನ್ನು ಕಾರ್ತಿಕ್ ಅವರ ಪತ್ನಿಗೆ ವಾಟ್ಸಾಪ್ ಮಾಡಿದ್ದು, ಇದರಿಂದ ಅವರ ಸಂಸಾರದಲ್ಲಿ ಕಲಹ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಲ್ಲದೆ ಜಯನಗರದ ಆಸ್ಪತ್ರೆ ಬಳಿ ಬಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಉದ್ಯಮಿ ಅಳಲು ತೋಡಿಕೊಂಡಿದ್ದಾರೆ.

    ಜಯನಗರ ಪೊಲೀಸರು ಸುಲಿಗೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ದೂರುದಾರರಿಗೆ ಸೂಚಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿ ಸಾಧನಾ ಶೆಟ್ಟಿ ಅವರಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

    Post Views: 34

    CrimeNews karnataka lifestyle PoliceInvestigation

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026

    ನಿವೃತ್ತ ಪೋಸ್ಟ್ ಮಾಸ್ಟರ್‌ಗೆ 6 ಕೋಟಿ ರೂ. ಬಂಪರ್ ಲಾಟರಿ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.