Facebook Twitter Instagram
    Wednesday, June 17
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪ್ರೇಮದ ನಾಟಕ, ಬ್ಲ್ಯಾಕ್‌ಮೇಲ್ ಜಾಲ: ಕಿರುತೆರೆ ನಟ ಪೊಲೀಸರ ವಶಕ್ಕೆ
    ಇತ್ತೀಚಿನ ಸುದ್ದಿ

    ಪ್ರೇಮದ ನಾಟಕ, ಬ್ಲ್ಯಾಕ್‌ಮೇಲ್ ಜಾಲ: ಕಿರುತೆರೆ ನಟ ಪೊಲೀಸರ ವಶಕ್ಕೆ

    May 2, 2026
    Share

    ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ, ಖಾಸಗಿ ವಿಡಿಯೋಗಳನ್ನು ಮುಂದಿಟ್ಟು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಿರುತೆರೆ ನಟ ಹನಿಯೂರು ಚಂದ್ರೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು 43 ವರ್ಷದ ಮೇಕಪ್ ಆರ್ಟಿಸ್ಟ್‌ ಸೇರಿದಂತೆ ಹಲವು ಮಹಿಳೆಯರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ.

    ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಒಂಟಿ ಮಹಿಳೆಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಚಂದ್ರೇಗೌಡ, ತಾನು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಕೀಲ ಅಥವಾ ಕಾಲೇಜು ಉಪನ್ಯಾಸಕ ಎಂದು ಸುಳ್ಳು ಹೇಳುತ್ತಿದ್ದ. ಸಂತ್ರಸ್ತರಿಗೆ ತಿಳಿಯದಂತೆ ಅವರ ಖಾಸಗಿ ಕ್ಷಣಗಳನ್ನು ವಿಡಿಯೋ ಮತ್ತು ಫೋಟೋ ಸೆರೆಹಿಡಿಯುತ್ತಿದ್ದ ಈತ, ಅವುಗಳನ್ನು ವೈರಲ್ ಮಾಡುವ ಬೆದರಿಕೆಯೊಡ್ಡಿ ಹಣ ಹಾಗೂ ಆಭರಣಗಳನ್ನು ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ಮೊಬೈಲ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಜೊತೆಗಿನ ಖಾಸಗಿ ಫೋಟೋಗಳು ಪತ್ತೆಯಾಗಿದ್ದು, ಇದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ತಾನು ಎಸ್ಪಿ ಎಂದು ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡಿದ್ದ ಈತ, ಟೋಲ್‌ಗಳಲ್ಲಿ ಅದನ್ನು ಬಳಸುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಹಿಳೆಯರು ದೂರು ನೀಡಲು ಮುಂದೆ ಬರುವಂತೆ ಕೋರಿದ್ದಾರೆ.

    ರಾಜ್ಯ ಎನ್‌ಎಸ್‌ಎಸ್‌ ಸಂಸ್ಥೆಯ ಅಧಿಕಾರಿ ಡಾ.ಎನ್‌ ಪ್ರತಾಪ್‌ ಲಿಂಗಯ್ಯ ಅವರನ್ನು ಬೆದರಿಸಿ 15 ಲಕ್ಷ ರೂ.ಬೇಡಿಕೆ ಇಟ್ಟ ಆರೋಪ ಸಂಬಂಧ ಹನಿಯೂರು ಚಂದ್ರೇಗೌಡ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ. ಎನ್‌ಎಸ್‌ಎಸ್‌ ಸಂಸ್ಥೆಯ ಕುರಿತು ನಿರಂತರವಾಗಿ ಆರ್‌ಟಿಐ ಸಲ್ಲಿಸಿ ಚಂದ್ರೇಗೌಡ ಕಿರುಕುಳ ನೀಡುತ್ತಿದ್ದ. ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ಬೆದರಿಸಿದ್ದ ಎಂದು ಪ್ರತಾಪ್‌ ಲಿಂಗಯ್ಯ ಆರೋಪಿಸಿದ್ದರು

    Post Views: 100

    karnataka PoliceInvestigation

    Related Posts

    ಐಎಎಫ್ ಅಧಿಕಾರಿಯ ಪತ್ನಿಗೆ ಕಿರುಕುಳ ಆರೋಪ: ವೈರಲ್ ವಿಡಿಯೋ ಬೆನ್ನಲ್ಲೇ ಇಬ್ಬರ ಅರೆಸ್ಟ್

    June 16, 2026

    ಕೋಟಿ ಕೋಟಿ ಡ್ರಗ್ಸ್ ಸಾಗಾಟ ಪತ್ತೆ: ಪೊಲೀಸರ ಭರ್ಜರಿ ಕಾರ್ಯಾಚರಣೆ

    June 16, 2026

    ಕೆಮ್ಮಿನ ಸಿರಪ್‌ಗೂ ಡಾಕ್ಟರ್ ಚೀಟಿ ಬೇಕು: ಕೇಂದ್ರದಿಂದ ಹೊಸ ಆದೇಶ

    June 16, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಐಎಎಫ್ ಅಧಿಕಾರಿಯ ಪತ್ನಿಗೆ ಕಿರುಕುಳ ಆರೋಪ: ವೈರಲ್ ವಿಡಿಯೋ ಬೆನ್ನಲ್ಲೇ ಇಬ್ಬರ ಅರೆಸ್ಟ್

    June 16, 2026

    ಕೋಟಿ ಕೋಟಿ ಡ್ರಗ್ಸ್ ಸಾಗಾಟ ಪತ್ತೆ: ಪೊಲೀಸರ ಭರ್ಜರಿ ಕಾರ್ಯಾಚರಣೆ

    June 16, 2026

    ಕೆಮ್ಮಿನ ಸಿರಪ್‌ಗೂ ಡಾಕ್ಟರ್ ಚೀಟಿ ಬೇಕು: ಕೇಂದ್ರದಿಂದ ಹೊಸ ಆದೇಶ

    June 16, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.