ಉಡುಪಿ : ಗೌರವಾನ್ವಿತ ಲೋಕಾಯುಕ್ತರವರ 2026 ರ ಏಪ್ರಿಲ್ 23 ರ ದಿನಾಂಕ ಆದೇಶದನ್ವಯ, ಈ ಪ್ರಕರಣವನ್ನು ಇಂದು ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ. ಮೊದಲನೇ ಎದುರುದಾರರಾದ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರು ಆಡಳಿತಾತ್ಮಕ ಕಾರಣಗಳನ್ನು ನೀಡಿ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ಕೋರಿದ್ದಾರೆ. ಅವರು ಈ ಪ್ರಾಧಿಕಾರಕ್ಕೆ ಬರೆದಿರುವ ಪತ್ರದಲ್ಲಿ, ತಮ್ಮ ಪರವಾಗಿ ಉಡುಪಿ ಜಿಲ್ಲೆಯ ಹಿರಿಯ ಭೂವಿಜ್ಞಾನಿಯಾದ ವಿಂಧ್ಯಾ ಅವರು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ದೂರುದಾರರಾದ ಶ್ರೀ ಗಣೇಶ್ ಶೆಟ್ಟಿ ಅವರು ಹಾಜರಿದ್ದರು.
ದೂರಿನ ಆರೋಪಗಳಿಗೆ ಸಂಬAಧಿಸಿದAತೆ ವರದಿ ಸಲ್ಲಿಸುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಲಾಗಿದ್ದರೂ, ಅವರು ಯಾವುದೇ ವರದಿಯನ್ನು ಸಲ್ಲಿಸಿರುವುದಿಲ್ಲ. ದೂರಿನಲ್ಲಿ ಮಾಡಲಾದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಉಡುಪಿ ಜಿಲ್ಲಾಧಿಕಾರಿಯವರು ತಮ್ಮ ವರದಿಯನ್ನು ಸಲ್ಲಿಸಬೇಕಾಗಿತ್ತು. ಏಕೆಂದರೆ ಈ ವಿಷಯವು ಅಕ್ರಮ ಮರಳು ಗಣಿಗಾರಿಕೆಗೆ ಸಂಬ0ಧಿಸಿದ್ದಾಗಿದ್ದು, ಇದು ರಾಜ್ಯದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಒಂದು ದೊಡ್ಡ ದಂಧೆ ಮತ್ತು ಹಗರಣವಾಗಿದೆ.
ಮಾಡಲಾದ ಆರೋಪಗಳ ಪ್ರಕಾರ ಮರಳು ಗಣಿಗಾರಿಕೆಯ ಬಗ್ಗೆ ಮೂಡಿಬಂದಿರುವ ಆತಂಕಕಾರಿ ಚಿತ್ರಣವನ್ನು ಗಮನಿಸಿ, ಗೌರವಾನ್ವಿತ ಲೋಕಾಯುಕ್ತರವರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಉಡುಪಿ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅದರಂತೆ, ಅವರು 2026 ರ ಏಪ್ರಿಲ್ 27 ರಂದು ವರದಿಯೊಂದನ್ನು ಸಲ್ಲಿಸಿರುತ್ತಾರೆ.
ಈ ವರದಿಯ ಪರಿಶೀಲನೆಯಿಂದ, ತನಿಖೆ ಮತ್ತು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಹಲವಾರು ಅಕ್ರಮಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವುದು ಸ್ಪಷ್ಟವಾಗಿ ಕಂಡುಬAದಿದೆ.
ಉಡುಪಿ ಜಿಲ್ಲೆಯ ಹಿರಿಯ ಭೂವಿಜ್ಞಾನಿಯವರು ಕಳೆದ ಬಾರಿ ನನ್ನ ಮುಂದೆ ಹಾಜರಿದ್ದರೂ ಮತ್ತು ಆರೋಪಗಳ ಗಂಭೀರತೆಯ ಬಗ್ಗೆ ಅವರಿಗೆ ಅರಿವಿದ್ದರೂ, ದೂರಿನಲ್ಲಿ ಆರೋಪಿಸಲಾದ ವಿವಿಧ ಅಕ್ರಮಗಳು ಮತ್ತು ಕಾನೂನುಬಾಹಿರ ಅಂಶಗಳ ಕುರಿತು ಸ್ವತಂತ್ರವಾಗಿ ಸ್ಥಳ ಪರಿಶೀಲನೆ ನಡೆಸಿರುವುದಿಲ್ಲ. ಅಲ್ಲದೇ, ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರೂ ಕೂಡ ಇದನ್ನು ಪರಿಶೀಲಿಸಿರುವುದಿಲ್ಲ.
ಅನುಮತಿಸಲಾದ ಪ್ರದೇಶವನ್ನು ಮೀರಿ ಮತ್ತು ನದಿಯ ಪಾತ್ರವನ್ನು ಆಳವಾಗಿ ಅಗೆಯುವ ಮೂಲಕ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬುದು ಮುಖ್ಯ ಆರೋಪವಾಗಿದೆ. ಇದು ಪರಿಸರ ಸಮತೋಲನ ಹಾಗೂ ಖಾಸಗಿ ಜಮೀನುಗಳ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುತ್ತಿದೆ. ಲೋಕಾಯುಕ್ತ ಪೊಲೀಸರ ವರದಿಯಲ್ಲಿ, ಮರಳು ಗಣಿಗಾರಿಕೆ ನಡೆಯಬೇಕಾದ ಗಡಿಯನ್ನು ನೀರಿನ ಬಲೂನ್‌ಗಳನ್ನು ಇರಿಸುವ ಮೂಲಕ ಗುರುತಿಸಲಾಗಿದ್ದರೂ, ಸುಮಾರು 300 ಮೀಟರ್‌ಗಳಿಗಿಂತಲೂ ಹೆಚ್ಚಿನ ದೂರದಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಮತ್ತು ಮರಳು ತರಲು ದೋಣಿಗಳನ್ನು ಬಳಸಲಾಗುತ್ತಿದೆ. ನದಿಯ ದಂಡೆಯಿAದ ಸುಮಾರು 10 ಅಡಿ ದೂರದ ವ್ಯಾಪ್ತಿಯಲ್ಲೇ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದೂ ವರದಿಯಲ್ಲಿ ನಮೂದಿಸಲಾಗಿದೆ. ಯಾವುದೇ ದೋಣಿಗಳಿಗೆ ಜಿ.ಪಿ.ಎಸ್ ಅಳವಡಿಸಿಲ್ಲ ಮತ್ತು ಇಲಾಖೆಯ ಯಾವುದೇ ಅಧಿಕಾರಿಯು ಈ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸದ ಕಾರಣ, ಸಾಗಣೆದಾರರಿಗೆ ಯಾವುದೇ ಹೊಣೆಗಾರಿಕೆ ಇಲ್ಲದಂತಾಗಿದೆ.
ಇಂದು ಗೌರವಾನ್ವಿತ ಲೋಕಾಯುಕ್ತರವರ ಮುಂದೆ ಹಾಜರಾದ ದೂರುದಾರರು ಕೆಲವು ಛಾಯಾಚಿತ್ರಗಳನ್ನು ಹಾಜರುಪಡಿಸುವ ಮೂಲಕ, ನದಿಯ ಹರಿವಿನಲ್ಲಿ ರೂಪುಗೊಂಡ ದ್ವೀಪಗಳನ್ನೂ ಸಹ ಗುರಿಯಾಗಿಸಿಕೊಂಡು, ಅಕ್ರಮ ಮರಳು ಗಣಿಗಾರಿಕೆಯ ಪ್ರಕ್ರಿಯೆಯಲ್ಲಿ ಅವುಗಳನ್ನು ನಾಶಪಡಿಸಲಾಗುತ್ತಿದೆ ಎಂದು ತೋರಿಸಿದ್ದಾರೆ. ಪರಿಸರ ಮತ್ತು ನೈಸರ್ಗಿಕ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನಿಯಮ ಮತ್ತು ನಿಬಂಧನೆಗಳನ್ನು ಗಾಳಿಗೆ ತೂರಿ ಬೃಹತ್ ಪ್ರಮಾಣದಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬ0ಧಪಟ್ಟ ಅಧಿಕಾರಿಗಳು ಪರವಾನಗಿದಾರರೊಂದಿಗೆ ಶಾಮೀಲಾಗದ ಹೊರತು ಇದು ಸಾಧ್ಯವಿಲ್ಲ.
ಜಿಲ್ಲೆಯ ಜಿಲ್ಲಾಧಿಕಾರಿಯಾಗಲಿ ಅಥವಾ ಗೌರವಾನ್ವಿತ ಲೋಕಾಯುಕ್ತರವರ ಮುಂದೆ ಹಾಜರಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಯಾಗಲಿ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ವಾಸ್ತವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು, ಈ ನಿಟ್ಟಿನಲ್ಲಿ ಉಂಟಾಗಿರುವ ಹಾನಿ ಮತ್ತು ನಷ್ಟವನ್ನು ಅಂದಾಜು ಮಾಡಲು, ಉಲ್ಲಂಘನೆಯ ವ್ಯಾಪ್ತಿಯನ್ನು ಪತ್ತೆಹಚ್ಚಲು ಹಾಗೂ ಸಂಬ0ಧಪಟ್ಟ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ತಪ್ಪು ಮಾಡಿದ ವ್ಯಕ್ತಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ವಿವರವಾದ ತನಿಖೆಯ ಅಗತ್ಯವಿದೆ. ಎಂದು ಗೌರವಾನ್ವಿತ ಲೋಕಾಯುಕ್ತರವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದ್ದರಿಂದ, ಮೊದಲ ಹಂತವಾಗಿ ಲೋಕಾಯುಕ್ತ ಪೊಲೀಸರ ವರದಿಯ ಪ್ರತಿಯನ್ನು ಪ್ರತಿವಾದಿ ಸಂಖ್ಯೆ 1 ಮತ್ತು 2 (ಕ್ರಮವಾಗಿ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಹಾಗೂ ಹಿರಿಯ ಭೂ ವಿಜ್ಞಾನಿಗಳು, ಉಡುಪಿ) ರವರಿಗೆ ಜಾರಿ ಮಾಡಬೇಕೆಂದು ಗೌರವಾನ್ವಿತ ಲೋಕಾಯುಕ್ತರವರು ಆದೇಶಿಸಿ, ಅವರಿಗೆ ಉತ್ತರ ಸಲ್ಲಿಸಲು ತಿಳಿಸಲಾಗಿದೆ.
ಗೌರವಾನ್ವಿತ ಲೋಕಾಯುಕ್ತರವರು ತಜ್ಞರನ್ನು ಸಮಿತಿಯೊಂದನ್ನು ರಚಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ, ಸದರಿ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ, ನಡೆದಿರುವ ಘೋರ ಅಕ್ರಮಗಳ ಸ್ವರೂಪವನ್ನು ಹಾಗೂ ಈ ಕಾನೂನುಬಾಹಿರ ಕೃತ್ಯಗಳಿಂದಾಗಿ ಉಂಟಾಗಿರುವ ಪರಿಸರ ಹಾನಿ ಮತ್ತು ಪರಿಸರ ವ್ಯತ್ಯಯಗಳ ಹೊರತಾಗಿ, ಸರ್ಕಾರಿ ಖಜಾನೆಗೆ ಆಗಿರುವ ಆರ್ಥಿಕ ನಷ್ಟದ ಪ್ರಮಾಣವನ್ನು ಅಂದಾಜು ಮಾಡಬೇಕಿದೆ.
ಸಮಿತಿಯು ಈ ಕೆಳಗಿನ ಪ್ರತಿನಿಧಿಗಳನ್ನು ಒಳಗೊಂಡಿರಬೇಕು : ಮುಖ್ಯಸ್ಥರು, ಪರಿಸರ ವಿಭಾಗ, ಸುರತ್ಕಲ್ ಎಂಜಿನಿಯರಿAಗ್ ಕಾಲೇಜು, ಉಡುಪಿ, ಮುಖ್ಯಸ್ಥರು, ಭೂ ವಿಜ್ಞಾನ ವಿಭಾಗ, ಸುರತ್ಕಲ್ ಎಂಜಿನಿಯರಿAಗ್ ಕಾಲೇಜು, ಉಡುಪಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ, ಹಿರಿಯ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಉಡುಪಿ. ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ, ಸಹಾಯಕ ನಿರ್ದೇಶಕರು, ಭೂ ದಾಖಲೆಗಳ ಇಲಾಖೆ, ಉಡುಪಿ ಮತ್ತು ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ.
ಸಮಿತಿಯ ಸದಸ್ಯರು ಪ್ರಾರಂಭಿಕವಾಗಿ ಮೇ 21 ರಂದು ಸ್ಥಳಕ್ಕೆ ಭೇಟಿ ನೀಡಬೇಕೆಂದು ಗೌರವಾನ್ವಿತ ಲೋಕಾಯುಕ್ತರವರು ಆದೇಶಿಸಿರುತ್ತಾರೆ. ಅಗತ್ಯವಿದ್ದಲ್ಲಿ, ಎಲ್ಲರಿಗೂ ಅನುಕೂಲಕರವಾದ ದಿನಾಂಕವನ್ನು ನಿಗದಿಪಡಿಸುವ ಮೂಲಕ ಮುಂದಿನ ವಾರದಲ್ಲಿ ಎರಡನೇ ಭೇಟಿಯನ್ನೂ ಮಾಡಬಹುದು. ದೂರಿನಲ್ಲಿ ಆರೋಪಿಸಲಾದ ಉಲ್ಲಂಘನೆಗಳಿಗೆ ಸಂಬAಧಿಸಿದ ಪ್ರತಿಯೊಂದು ಅಂಶವನ್ನು ಸಮಿತಿಯು ಪರಿಶೀಲಿಸಿ, ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ಸಾಮಾನ್ಯ ಅವಲೋಕನಗಳಿಗೆ ಸಂಬAಧಿಸಿದAತೆ ಸಾಧ್ಯವಾದಷ್ಟು ಜಂಟಿ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಅದಾಗ್ಯೂ, ಅವರ ಪರಿಣಿತಿಯ ಆಧಾರದ ಮೇಲಿನ ವಿಶೇಷ ಅವಿಷ್ಕಾರಗಳಿಗೆ ಸಂಬAಧಿಸಿದAತೆ. ಪ್ರತಿ ತಜ್ಞರು ತಮ್ಮ ಪ್ರತ್ಯೇಕ ವರದಿಯನ್ನು ನೀಡಬಹುದು. ಅಂತಹ ವರದಿಗಳು ಜೂನ್ 16 ರ ಒಳಗೆ ಈ ಕಚೇರಿಯನ್ನು ತಲುಪಬೇಕು.
ಉಡುಪಿ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯವರು ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದರಿ0ದ, ಅವರು ಉಡುಪಿ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕರ ವರದಿಯನ್ನು ಸ್ವೀಕರಿಸಿದ ನಂತರ ಮುಂದಿನ ವಿಚಾರಣೆಯ ದಿನಾಂಕದAದು ತಮ್ಮ ವಿವರಣೆಯನ್ನು ಸಲ್ಲಿಸಬೇಕಾಗಿದೆ. ಸದ್ಯಕ್ಕೆ ಪ್ರತಿವಾದಿಗಳಲ್ಲಿ ಯಾರೊಬ್ಬರೂ ಯಾವುದೇ ತಡೆಗಟ್ಟುವ ಕ್ರಮಗಳನ್ನು ಕೈಗೊಂಡಿಲ್ಲ, ಇನ್ನು ದಂಡನಾತ್ಮಕ ಕ್ರಮಗಳಂತೂ ದೂರದ ಮಾತು ಎಂಬುದನ್ನು ಲೋಕಾಯುಕ್ತ ಪೊಲೀಸರ ವರದಿ ಸ್ಪಷ್ಟಪಡಿಸುತ್ತದೆ ಎಂದು ಗಮನಿಸಲಾಗಿದೆ.
ಈ ಆದೇಶವನ್ನು ಸಮಿತಿಯ ಸದಸ್ಯರಿಗೆ, ಪ್ರತಿವಾದಿಗಳಿಗೆ ಮತ್ತು ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸುವಂತೆ ಗೌರವಾನ್ವಿತ ಲೋಕಾಯುಕ್ತರವರು ಆದೇಶಿಸಿ ಮುಂದಿನ ವಿಚಾರಣೆಯನ್ನು ಜೂನ್ 20 ರ ಮಧ್ಯಾಹ್ನ 12.30 ಕ್ಕೆ ನಿಗದಿಪಡಿಸಲಾಗಿದೆ.




