Facebook Twitter Instagram
    Friday, May 22
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರಿನಲ್ಲಿ ಕಾಮಗಾರಿ ಅವಘಡ: ಗೋಡೆ-ಮಣ್ಣು ಕುಸಿದು ಕಾರ್ಮಿಕರ ಎದುರೇ ಕಂಟ್ರಾಕ್ಟರ್ ಸಾವು
    ಇತ್ತೀಚಿನ ಸುದ್ದಿ

    ಮಂಗಳೂರಿನಲ್ಲಿ ಕಾಮಗಾರಿ ಅವಘಡ: ಗೋಡೆ-ಮಣ್ಣು ಕುಸಿದು ಕಾರ್ಮಿಕರ ಎದುರೇ ಕಂಟ್ರಾಕ್ಟರ್ ಸಾವು

    May 22, 2026
    Share

    ಮಂಗಳೂರು: ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಮನೆಯೊಂದರ ಆವರಣ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗೋಡೆ ಹಾಗೂ ಮಣ್ಣು ಏಕಾಏಕಿ ಕುಸಿದು ಬಿದ್ದು, ಹಿರಿಯ ಕಂಟ್ರಾಕ್ಟರ್ ಒಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೇ 21ರ ಗುರುವಾರ ನಡೆದಿದೆ. ನಗರದ ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.ಆಂಟನಿ ಮಸ್ಕರೇನಸ್ ಅವರು ಕುಂಟಿಕಾನದ ಲೋಹಿತ್ ನಗರದಲ್ಲಿ ಮನೆಯೊಂದರ ಹಿಂಭಾಗದ ಆವರಣ ಗೋಡೆ ನಿರ್ಮಾಣದ ಗುತ್ತಿಗೆಯನ್ನು ವಹಿಸಿಕೊಂಡಿದ್ದರು. ಈಗಾಗಲೇ ಒಂದಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದವು. ಗುರುವಾರದಂದು ಅವರು ಎಂದಿನಂತೆ ಕಾರ್ಮಿಕರ ಜೊತೆ ನಿಂತು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಾ, ಗೋಡೆಯ ಅಳತೆ ಕಾರ್ಯದಲ್ಲಿ ತೊಡಗಿದ್ದರು.ಈ ವೇಳೆ ತಡೆಗೋಡೆಯ ಮಣ್ಣು ಹಾಗೂ ಗೋಡೆ ಏಕಾಏಕಿ ಇವರ ಮೇಲೆಯೇ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಆಂಟನಿ ಅವರು ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.ತಕ್ಷಣವೇ ಅಲ್ಲಿದ್ದ ಕಾರ್ಮಿಕರು ಹಾಗೂ ಸ್ಥಳೀಯರು ಧಾವಿಸಿ ತೀವ್ರ ಕಾರ್ಯಾಚರಣೆ ನಡೆಸಿ ಆಂಟನಿ ಅವರನ್ನು ಮಣ್ಣಿನಡಿಯಿಂದ ಮೇಲೆತ್ತಿದ್ದಾರೆ. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾವೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

    Post Views: 13

    dakshina kannada karnataka mangalore

    Related Posts

    ಬಂಟ್ವಾಳ: ಕಾಣೆಯಾಗಿದ್ದ ಆಟೋ ಚಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ!!

    May 22, 2026

    ನದಿ ತೀರದಲ್ಲಿ ಚಿತೆ ಸಿದ್ಧಪಡಿಸುತ್ತಿದ್ದ ಅಳಿಯನ ಮೇಲೆ ಮೊಸಳೆ ದಾಳಿ-24 ಗಂಟೆಗಳ ಬಳಿಕ ಶವ ಪತ್ತೆ

    May 21, 2026

    ಮಂಗಳೂರಿನ ವಿದ್ಯಾರ್ಥಿನಿಯರಿಗೆ ಕಿರುಕುಳ – ಬೆಳ್ತಂಗಡಿಯಲ್ಲಿ ಮೂವರ ವಿರುದ್ಧ ಪ್ರಕರಣ

    May 21, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.